ಹಳೆ ಹಾಡುಗಳು ಹೊಸ ಆಯಾಮ. ಹೌದು ಹಳೆ ಹಾಡುಗಳನ್ನು ಕೇಳುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ, ಎಲ್ಲರೂ ತುಂಬಾ ಸಂತೋಷದಿಂದ ಹಳೆಯ ಹಾಡು ಗಳನ್ನು ಕೇಳಿಸಿಕೊಳ್ಳುತ್ತಾರೆ . ಹಳೆಯ ಹಾಡುಗಳು ಎಷ್ಟು ಜನಪ್ರಿಯವಾಗಿದೆ ಅಂದರೆ ಆ ಹಾಡನ್ನು ಇಂದು ಹೊಸ ಆಯಾಮದಲ್ಲಿ ಬಳಸಿಕೊಳ್ಳಲಾಗುತ್ತಿದೆ . ಅಂತಹ ಹಾಡುಗಳನ್ನು ಕೇಳಿಸಿಕೊಂಡಾಗ ಹಳೆಯ ನೆನಪುಗಳಿಗೆ ಮನಸು ಜಾರುತ್ತದೆ. ಹಳೆಯ ಹಾಡು ಹೇಗಿರುತ್ತಿದ್ದವು ಅಂದರೆ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಹಿಡಿದು ಆತನ ಆಟ, ಪಾಠ ,ಕಲಿಕೆ, ಕೆಲಸ, ಮದುವೆ, ವೃದ್ಧಾಪ್ಯ ,ಸಾವು ಇತ್ಯಾದಿಗಳು ಆ ಹಾಡು ಗಳಲ್ಲಿ ಇರುತ್ತಿದ್ದವು .ಈ ಹಾಡುಗಳು ಜನರನ್ನು ಎಷ್ಟು ಸೆಳೆಯುತ್ತಿದ್ದವು ಅಂದರೆ ಯಾರಲ್ಲಿ ಕೇಳಿದರೂ ಆ ಹಾಡುಗಳು ಅವರ ಬಾಯಲ್ಲಿ ಗೊಣಗಾಡುತಿದ್ದವು .

ಆದರೆ ಇಂದಿನ ಹಾಡುಗಳು ಹಾಗಲ್ಲ . ನಾವು ಆಚರಿಸುವ ,ನೋಡುವ,ಕೇಳುವ , ನಮ್ಮ ಜೀವನ ಶೈಲಿ ಎಲ್ಲಾ ಬದಲಾದ ಹಾಗೆ ಇಂದು ಬರುವ ಹಾಡುಗಳ ಶೈಲಿಯು ಬದಲಾಗಿದೆ. ಇಂದಿನ ಹಾಡುಗಳಲ್ಲಿ ಹಿಂದೆ ಬರುತಿದ್ದ ಹಾಡುಗಳನ್ನು ಬಳಸಿಕೊಂಡು ಅದಕ್ಕೆ ಒಂದು ಹೊಸ ಆಯಾಮವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿನ ಹಾಡುಗಳ ಶಕ್ತಿ ಎಂತದ್ದು ಎಂಬುದು ಇದರಲ್ಲೆ ತಿಳಿದುಬರುತ್ತದೆ . ಆಗಿನ ಕಾಲದ ಹಾಡುಗಳು ಮನಸ್ಸಿಗೆ ಹಿತವನ್ನು ಉಂಟು ಮಾಡುತ್ತಿದ್ದವು . ಅಲ್ಲದೆ ಆ ಹಾಡುಗಳನ್ನು ರಚಿಸುವ ಶೈಲಿ ಈಗಿನ ಹಾಡಿಗಿಂತ ಭಿನ್ನವಾಗಿದ್ದವು . ಹಾಡುಗಳಲ್ಲಿ ಬಳಸುವ ಪದ ನಮ್ಮನ್ನು ಆಕರ್ಷಣೆಗೆ ಒಳಪಡಿಸುತಿದ್ದವು . ಹಿಂದಿನ ಕಾಲದ ಹಾಡುಗಳನ್ನು ಇಂದಿನ ಕಾಲದ ಹಾಡುಗಳಿಗೆ ತಂದಾಗ ಅದು ಕೆಲವರಿಗೆ ತಮ್ಮ ನೆನಪುಗಳನ್ನು ಮರುಕಳಿಸಿರ ಬಹುದು. ಇನ್ನು ಕೆಲವರಿಗೆ ಹಳೆಯ ಹಾಡುಗಳ ಪರಿಚಯ ಮಾಡಿರಬಹುದು.
ಉದಾಹರಣೆಗೆ ಕನ್ನಡದ ಜೋಕೇ.. ನಾನು ಬಳ್ಳಿಯ ಮಿಂಚು, ಹಿಂದಿಯ ಮುಖಾಲಾ ಮುಖಾಬುಲಾ, ಕೊಕೊಕ್ಕೊಲ್ಲ ತು,ಲೆಲಾಮೆ ಲೆಲಾ ಇತ್ಯಾದಿ ಹಾಡುಗಳನ್ನು ಗಮಿಸಬಹು ದಾಗಿದೆ.

ಹಾಗಾಗಿ ಹಾಡುಗಳು ಹೊಸದಾಗಲಿ ಹಳೆಯದಾಗಲಿ ಅದಕ್ಕೆ ಎಂದೆಂದಿಗೂ ಅಭಿಮಾನಿಗಳು ಇದ್ದೆಯಿರುತ್ತಾರೆ. ಏಕೆಂದರೆ ಹಾಡುಗಳು ನಮ್ಮ ಭಾವನೆಗೆ ಸ್ಪಂದಿಸುತ್ತವೆ . ನಮಗೆ ಖುಷಿಯಾಗಿರಲಿ , ನೋವಾಗಿರಲಿ ನಾವು ಆ ಸಮಯದಲ್ಲಿ ಹಾಡುಗಳನ್ನು ಕೇಳಿದಾಗ ಆ ಕ್ಷಣಕ್ಕೆ ಅವುಗಳೆ ನಮಗೆ ಸಮಾಧಾನ ಮಾಡುವ ಗೆಳೆಯನಾಗಿರುತ್ತದೆ.

       🔆🔆🔆

✍️ ಪ್ರಣವ್ ಎಂ ಪ್ರಕಾಶ್
ಎಸ್ ಡಿ ಎಂ ಕಾಲೇಜು ಉಜಿರೆ