ಕರುಳಿನ ಬಂಧವಿದು
ನಿನ್ನೆ ಮೊನ್ನೆಯದ್ದಲ್ಲ
ಪ್ರೀತಿಯ ಸಂಕೇತವ
ಪ್ರತಿಬಿಂಬಿಸುವ ಛಾಯೆ

ಕನಸಿನ ಕಾಲುವೆಯಲ್ಲಿ
ಕಟ್ಟಿರುವ ಸೇತುವೆಯಂತೆ
ಕರುಳಿನ ಬಂಧವಿದು
ನಿನ್ನೆ ಮೊನ್ನೆಯದ್ದಲ್ಲ

ಕಲ್ಪನೆಯ ಕಾರ್ಮುಗಿಲ
ವಾಸ್ತವಿಕ ಸಂಬಂಧದಂತೆ
ಕರುಳಿನ ಬಂಧವಿದು
ನಿನ್ನೆ ಮೊನ್ನೆಯದ್ದಲ್ಲ

ಕೊರಳಲ್ಲಿನ ಕರಿಮಣಿಗೆ
ಕಾಣಿಕೆಯ ಪ್ರತಿರೂಪದಂತೆ
ಕರುಳಿನ ಬಂಧವಿದು
ನಿನ್ನೆ ಮೊನ್ನೆಯದ್ದಲ್ಲ

ಸಂಸಾರ ನೌಕೆಯ ತೂಗುವ
ನಾಯಕನ ನಿರೀಕ್ಷೆಯ ನೆರಳಂತೆ
ಕರುಳಿನ ಬಂಧವಿದು
ನಿನ್ನೆ ಮೊನ್ನೆಯದ್ದಲ್ಲ

             🔆🔆🔆

✍️ ಸಚಿನ.ಕೋಮಾರ
ಎಸ್.ಡಿ.ಎಂ.ಕಾಲೇಜ್ ಉಜಿರೆ