ವಲಸೆ ಹೋಗಿದೆ ಮನಸು
ಅವನ್ನು ಹುಡುಕುತ್ತಾ
ಕ್ಲಾಸ್ ರೂಮಿನ ಬಾಗಿಲ
ಚಿಲಕದ ಸ್ಪರ್ಶದಲ್ಲಿ

ಆಥವಾ ಇನ್ನಾವುದೋ
ನೋಟ್ಬುಕ್ಕಿನ ಕೊನೆಯ
ಪುಟಗಳಲ್ಲಿ

ಕಾಲೇಜಿನ ಮೆಟ್ಟಿಲಲ್ಲಿ
ಕಾರೊಡಾರಿನ ಸಾಲು
ಸಾಲು ಕಂಬಗಳಲ್ಲಿ

ಅಥವಾ ನಿನ್ನ ಬೆನ್ನು
ತಾಕುತ್ತಿದ್ದ
ಮುಂದಿನ ಬೆಂಚಿನಲ್ಲಿ

ಎಲ್ಲಿ ಎಂದು ಹುಡುಕಲಿ
ಎಲ್ಲಾ ನೀನೆ ಗೀಚಿಹೋದ
ನೆನಪ ರೇಖೆಗಳೇ ಇಲ್ಲಿ

                 🔆🔆🔆

✍️ಸುಮಾ.ಕಂಚೀಪಾಲ್ ಪತ್ರಿಕೋದ್ಯಮ ವಿಭಾಗ ಎಸ್.ಡಿ.ಎಂ.ಕಾಲೇಜ್ ಉಜಿರೆ