ಕಲ್ಲರಳಿ ಹೂವಾದರೆ,ಗುಡ್ಡದ ಮೇಲಿನ ಕಲ್ಲಿನ ಕೋಳಿಗೆ ಜೀವ ಬಂದಂತಾದರೆ, ಬದಲಾವಣೆ ಸಾಧ್ಯ ಎಂಬಂತಹ ಸಾಮಾನ್ಯ ರೂಢಿಗತ ಮಾತುಗಳು ತಮಾಷೆಯೆನಿಸಿ ದರೂ ಸತ್ಯವಾದುದು.ಮುಂದೆಂದಾದರೂ ಅಸಹಜ ಮನೋಭಾವಗಳಿಗೆ ಕೊನೆ ಹಾಡು ವಂತಾಗಲೆಂಬ ನಿರೀಕ್ಷೆ. ಸತ್ಯ ನುಡಿಯು ವುದು,ನಡೆಯುವುದು,ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ.ಬದುಕಿನ ಎಲ್ಲ ಸಂಕಷ್ಟಗಳನ್ನು ಎದುರಿ‌ಸುವಾಗ ಸತ್ಯ ವಚನಗಳನ್ನು ಮೀರಿ ನಡೆಯ‌ದಂತೆ ಪಾಠ, ಪ್ರವಚನಗಳಲ್ಲಿ ಹೇಳುತ್ತಿರುತ್ತೇವೆ. ಕಾರಣ ಮಗುವಿ‌ನ ಮಾಂತ್ರಿಕ ಬದುಕಿಗೆ ಮೌಲ್ಯಗಳು ಮಾನದಂಡವಾಗಿ ಬರಲೆಂಬ ಆಶಯ.

ಮಗು ಬಲಿಷ್ಠವಾಗಿ ಸದೃಢವಾಗಿರ ಬೇಕೆಂಬುದು ಹೆತ್ತವರ ಆಶಯ.ಮಾನಸಿಕ‌ ಸಾಮಥ್ರ್ಯದೊಂದಿಗೆ ಬುದ್ದಿ ಶಕ್ತಿಯು ಬಲ ವಾಗಬೇಕು.ನಿಸ್ವಾರ್ಥದಿಂದ ತಲೆ ಎತ್ತಿ ಧೈರ್ಯದಿಂದ ನಡೆಯಲು ಕಲಿಸುವಂತ ಮನಸ್ಥಿತಿ ಒಮ್ಮ ನದಿ ಸಾಧಿಸುವ ಗುರಿ ಮೊಳಕೆಯೊಡಯ ಬೇಕಿತ್ತೆಂದು ಅನ್ನಿಸ ತೊಡಗಿದಾಗಲೇ ಚಿಂತನೆಗಳು ಹೀಗೂ ಅರ್ಥೈಸುತ್ತವೆ. ರಕ್ತದ ಬಣ್ಣ ಬದಲಾಗದಿ ದ್ದರೂ,ಚಿತ್ತದಲ್ಲಿ ಅಚ್ಚೊತ್ತಿರುವ ಬಣ್ಣ ಮಾಸದಿರುವುದೇ ಇದಕ್ಕೆಲ್ಲ ಕಾರಣ ಒಂದೆಡೆಯಾದರೇ. ಏಳು ಬಣ್ಣ ಸೇರಿ ಕಾಮನಬಿಲ್ಲಾಗಿ ಕೊನೆಗೆ ಬಿಳಿಯ ಬಣ್ಣ ದಲ್ಲಿ ಲೀನವಾಗುವಾದರೆ ಎಷ್ಟು ಚೆನ್ನ? ಪ್ರತಿ‌ಹಂತದಲ್ಲೂ ಒಬ್ಬರಲ್ಲಾ ಒಬ್ಬರು ಗುರುಗಳಾಗಿ, ಮಾರ್ಗದರ್ಶಕರಾಗಿ ಬೆಂಗಾವಲಾಗಿದ್ದಾಗ ಮಾತ್ರ ಬದ್ದತೆಯ ತಾಣ ಶ್ರೇಷ್ಠವಾಗುವುದು.

ಐನ್ ಸ್ಟೈನ್ ಬುದ್ದಿಮಾಂದ್ಯ ವಿದ್ಯಾರ್ಥಿ ಯೆಂದು ಗೊತ್ತಿ ದ್ದರೂ ಶಾಲೆಯಿಂದ ಹೊರಹಾಕಿದ ಪತ್ರ ನೀಡಿದ್ದರೂ ತಾಯಿ ದೃತಿಗೆಡದೇ ಮಗನ ಮನೋಬಲ ಸದೃಢ ಗೊಳಿ ಸಲು ಬರೆದ ಪತ್ರದ ಸಾರಾಂಶವನ್ನೆ ತಿರುಚಿ ಓದಿದ ಮಹಾನ್ ಮಹಿಳೆ.ಅವಳ ದೃಷ್ಟಿಯಲ್ಲಿ ಮಗನ ಭವಿಷ್ಯ ಬಹುಮುಖ್ಯ ವೆಂದು ಅರಿತು ಹಗಲಿರುಳು ಅವನ ಶ್ರೇಯಸ್ಸಿಗೆ ಶ್ರಮವಹಿಸಿ ಯಾರು ತಿರಸ್ಕರಿಸಿ ದರೋ ಅವರ ಮುಂದಷ್ಟಲ್ಲದೇ ಇಡೀ ಜಗತ್ತಿಗೆ ಎಂಥ ಮಗುವಾದರೂ ತಾಯಿ ಮನಸ್ಸು ಮಾಡಿದರೇ ಎನೆಲ್ಲ ಸಾಧಿಸ ಬಹುದು ಎಂಬ ಸಂದೇಶ‌ ಸಾರಿ ಕತ್ತಲಾದ ಬದುಕಿಗೆ ಬೆಳಕನೀಡಿ ಅಮರಳಾದಳು. ಅವಳ ತ್ಯಾಗ ಮರಣದ ನಂತರ ಐನಸ್ಟೈನ್ ಸತ್ಯದ ಅರಿವಾಗಿ ಮರುಗಿದರು. ತನ್ನ ದೌರ್ಬಲ್ಯ ಮರೆಮಾಚಿ ಪ್ರೋತ್ಸಾಹ ನೀಡಿ ಇಂದು ಜಗತ್ಪ್ರಸಿದ್ಧ ವ್ಯಕ್ತಿಯಾಗಿಸಿದ ತಾಯಿ ಬಗ್ಗೆ ಹೆಮ್ಮೆಯೆನಿ ಸಿತು.ಹೀಗೆ ಪ್ರತಿ ತಂದೆ ತಾಯಿ ತಮ್ಮ ಮಗುವಿನ ದೌರ್ಬಲ್ಯಕ್ಕೆ ಮರುಗದೇ ಆತ್ಮವಿಶ್ವಾಸ ಚಿಗುರಿಸಿ ಬೆಳೆಸು ವತ್ತ ಹೆಜ್ಜೆಯಿಡಬೇಕು.ಅಂದಾಗ ಮಾತ್ರ ಬೆಳಕು ಬೀರಲು ಸಾಧ್ಯ,ಸಂಕಲ್ಪ ಮುಖ್ಯ.

ಆತ್ಮಸಮ್ಮಾನ ಹಂಚುವ ವ್ಯಕ್ತಿಯು ನಡೆದು ಬಂದ ನೈತಿಕ ಮೌಲ್ಯಗಳು ದಾರಿ ದೀಪ ವಾಗಲು ಸಾಧ್ಯ.ಮಕ್ಕಳಿಗೆ ಸತ್ಯ, ನಂಬಿಕೆ, ಪ್ರಾಮಾಣಿಕತೆ ಬಗ್ಗೆ ಹೇಳುವಾಗ ನಮ್ಮೊಳಗೂ ಅದು ಜಿನುಗುವ ಜೇನ ಹನಿಯಂತಿದ್ದಾಗ ಮಾತ್ರ ಅದಕ್ಕೆ ಬೆಲೆ ಯೆಂಬುದು ಪ್ರತ್ಯಕ್ಷ ಸಾಕ್ಷಿಗಳು.

ಮಹಾತ್ಮ ಗಾಂಧಿಯವರ ಸತ್ಯಶೋಧನೆ ಯಲ್ಲಿ ತಪ್ಪುಒಪ್ಪುಗಳ ಎದುರಾಗಿ ಬಹಿರಂಗಗೊಂಡ ಭಾವಗಳು ಎಲ್ಲರಿಗೂ ಆದರ್ಶ ಅನುಕರಣೀಯ.ಬಡತನದ ಬೇಗೆಯಲ್ಲಿ ಬೆಂದು ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಮಿಂಚಿನ ಓಟಗಾರ್ತಿ ಪಿ.ಟಿ.ಉಷಾ ನಮಗೆಲ್ಲ ಮಾದರಿ.ಇಂದು ಪಠ್ಯದ ಭಾಗವಾಗಿ ಬಂದಿರುವುದು ಹೆಮ್ಮೆಯ ಸಂಗತಿ.

ಕಾಯಕದಲ್ಲಿರದ ನಿಷ್ಠೆ,ಕೈಲಾಸ ಕಾಣುವುದ ರಲ್ಲಿದ್ದರೆ ಫಲವೆಂದಾದರೂ ದಕ್ಕಿತೇ? ಸಮಾಜ ಬದಲಿಸ ಹೊರಟವರಿಗೇ ಮೊದಲು ತಮ್ಮ ಮನೆಯ ಮೌಡ್ಯಗಳನ್ನು ತೊಲಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಮನಸ್ಸು ಮಾಡಿದರೆ ಸಮಾಜ ಬದಲಾಗಲು ಸಮಯ ಹಿಡಿಯದು.ಕೇವಲ ಉಪದೇಶದಿಂದ,ತೋರಿಕೆಗಳು ಬೆಕ್ಕು ಸನ್ಯಾಸಿಯಾದಂತೆಯೇ ಪ್ರಯೋಜನವಿಲ್ಲ. ಸತ್ಯ ಎಂದಿಗೂ ಬೂದಿಮುಚ್ಚಿದ ಕೆಂಡ ದಂತೆಯೇ ಒಂದಿಲ್ಲೊಂದು ದಿನ ಬೆಳಕಿಗೆ ಬಂದೆ ಬರುತ್ತದೆ.

ಮಗು ಹಣತೆಯ ಮಹತ್ವ ಅರಿಯುವುದು ಯಾವಾಗ? ಬೆಳಕೆಂಬ ಜ್ಞಾನದ ಕಿರಣ ಮಸ್ತಕದೊಳು ಮಿನುಗಬೇಕು. ನಮಗಾದ ಅನುಭವ ಮಕ್ಕಳಿಗೂ ಆಗಬೇಕೆಂದೇನಿಲ್ಲ. ನಮಗಿಂತ ಅಧಿಕವು ಅಥವಾ ಆಗದೆಯೂ ಇರಬಹುದು. ಹಾಗೆಂದ ಮಾತ್ರಕ್ಕೆ ಕಲಿಕೆ ಯಾಗಿಲ್ಲವೆಂದಲ್ಲ. ಅದರ ಗ್ರಹಿಕಾ ಸಾಮರ್ಥ್ಯದ ಮೇಲೆ ಅವಲಂಬನೆಯಾಗಿದೆ. ಹಸಿದವನಿಗೆ ಮಾತ್ರ ಹಸಿವಿನ ಬೆಲೆ ಅರ್ಥವಾಗುವುದು, ಅನ್ನದ ಮಹತ್ವವು ಕೂಡ.ರೈತನಿಗೆ ಮಾತ್ರ ಗೊತ್ತು ಯಾವಾಗ ಯಾವ ಕಾಳನ್ನು ಭೂಮಿಗೆ ಬಿತ್ತಬೇಕು… ಬಿತ್ತಿದ್ದೆಲ್ಲವೂ ಮೊಳಕೆಯೊಡೆದರೆ ಮಾತ್ರ ಹಬ್ಬ.ಇಲ್ಲವಾದರೆ ತಣ್ಣೀರ ಬಟ್ಟೆ ಒಡಲಿಗೆ.. ಬೆಳೆದ ಫಸಲು ಕೈ ಸೇರಿದಾಗಲೇ ಮನಕಾ ನಂದ…ಬೆಳೆಸಿದ ಮಕ್ಕಳಿಂದ ನೆಮ್ಮದಿಯ ನಿಟ್ಟುಸಿರು ಬೇಕೆಂದರೆ ಅದಕೊಂದು ಸುಭದ್ರ ಅಡಿಪಾಯ ಸಿದ್ದಪಡಿಸುವುದು ಬಹುಮುಖ್ಯ.

ನಮ್ಮಗಳ ಮನೋಭಾವ ವಿಚಿತ್ರ.ತಿಳಿದೋ ತಿಳಿಯದೆಯೋ ನಮ್ಮೆಲ್ಲ ಕನಸುಗಳನ್ನು ನೆರವೇರಿಸಲು ಮಕ್ಕಳನ್ನು ಮಾರ್ಗವಾಗಿ, ಗುರಿಯಾಗಿ ಬಳಸುತ್ತೆವೆ.ಅದರಲ್ಲಿ ಸಾಕಷ್ಟು ಪಾಲಕರು ಯಶಸ್ಸು ಗಳಿಸಿದ್ದು ಉಂಟು. ಏನೋ ಸಾರ್ಥಕತೆ ಸಾಧಿಸಿದ ಆನಂದ ಬಾಷ್ಪ ಕಣ್ಣಂಚಲ್ಲಿ. ಒಂದು ನೋಟಕ್ಕೆ ಸರಿಯೋ ತಪ್ಪೋ ಗೊಂದಲವಿಲ್ಲದೆ ಮೆಲುಕು ಹಾಕುವ ಗಳಿಗೆ….ನಮ್ಮ ಮುಂದೆ. ಒಂದು ಕಲ್ಪವೃಕ್ಷ ಫಲಕೊಡುವ ಸಮಯಕ್ಕೆ ನಾವೇ ಇಲ್ಲವಾಗಬಹುದು. ಆದರೆ ಅದರ ಫಲ ಇತರರಿಗೆ ಬಳಕೆಯಾಯಿತಲ್ಲವೆಂಬುದೆ ಸಾರ್ಥಕ ಬದುಕಿನ ಲಕ್ಷಣ.ಸತ್ಯದ ಗಟ್ಟಿತನ ಬೇರೂರುವಂತೆ ಇತರರಿಗೆ ಮಾದರಿಯಾ ಗುವಂತೆ ಅದರ ನೆರಳಲ್ಲಿ ಮಗು ಸನ್ಮಾರ್ಗ ಕಂಡು ಕೊಳ್ಳುವಂತಾದರೆ ಇನ್ನೆಲ್ಲಿಯ ವೇದನೆಗಳು ನಮ್ಮೊಳಗೆ…

       🔆🔆🔆           

✍️ ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ, ಯಲ್ಲಾಪೂರ