ಹಳ್ಳಕೊಳ್ಳಗಳನ್ನೆಲ್ಲ ಹಾರಿ
ಬೆಟ್ಟ-ಗುಡ್ಡಗಳನ್ನೆಲ್ಲ ಏರಿ
ಹಾರಿ ಜಿಗಿದು ಹೊಲದ ಬೇಲಿ
ಮಾಡುತ್ತಿದ್ದೆವು ಸೌತೆಕಾಯಿ ಖಾಲಿ
ಗಿಡವ ಏರಿ ಕೆಳಗೆ ಜಿಗಿದು
ಉಸುಕಿನಲ್ಲಿ ಉಲ್ಟಾ ನೆಗೆದು
ಪುಸ್ತಕದಲ್ಲಿಟ್ಟ ನವಿಲುಗರಿ
ಹಾಕುತ್ತಿತ್ತಲ್ಲ ಪುಟ್ಟ ಮರಿ
ನೀರಲ ಹಣ್ಣ ರುಚಿಯ ಸವಿದು
ಗೆಳೆಯರ ಕೈಯ ಮಾವು ಕಸಿದು
ಹಲಸಿನ ಬೀಜ ಒಣಗಲು ಬಿಟ್ಟು
ಹುಣಸೆ ಬೀಜಗಳನ್ನೆಲ್ಲಾ ಸುಟ್ಟು
ಖುಷಿಯಲಿ ಆಡಿದ ಆಟ ಒಂದೇ ಎರಡೇ
ನೆನೆ ನೆನೆದು ಬಿಚ್ಚುತಿದೆ ಇಂದು ಮನಸಿನ ಬಿರಡೆ
🔆🔆🔆
✍️ ವೀರೇಶ್ ಗಣಾಚಾರಿ ಶಿಕ್ಷಕರು,ರಾಮದುರ್ಗ