1.ಮುಷ್ಕರ ನಗರಿ
ಇಂದು ಎಲ್ಲರಿಗೂ ಬೆಂಗಳೂರೆಂದರೆ ಈಗ..
ಧರಣಿ, ಮುಷ್ಕರ, ಬಲ ಪ್ರದರ್ಶನಕೆ ಜಾಗ.!
ಪ್ರತಿ ಹೋರಾಟಗಾರರಿಗೂ ಬೇಕೇ ಬೇಕು.. ರಾಜಧಾನಿಯಲ್ಲಿನ ಆ ಫ್ರೀಡಮ್ ಪಾರ್ಕು     
🔆🔆

       
    2.ಜೋಕೆ ಹುಡುಗಿ.!                       
ಓ ಚೆಲುವೆ ಹಾಯಿಸು ಹೊರಗೊಮ್ಮೆ ನೋಟ
ಜೋರಾಗಿದೆ ಎಲ್ಲೆಡೆ ಮೀಸಲಾತಿ                 ಹೋರಾಟ !
ಖಾಲಿ ಇಡಬೇಡ ಹೃದಯದ                         ಒಲವ ಗದ್ದುಗೆ                                            ಸುಮ್ಮನೆ ಈಗಲೇ ಕೊಟ್ಟುಬಿಡು               ನನಗೆ  ಒಪ್ಪಿಗೆ                    


🔆🔆      
    3.ಸ್ಪಿನ್ ಗಾರುಡಿ.!

ಯರ್ರಾಬಿರ್ರಿ ತಿರುಗುತ್ತಿದೆ ಭಾರತದಲ್ಲಿ ಚೆಂಡು..
ನೋಡಿ ಕಕ್ಕಾಬಿಕ್ಕಿಯಾಗಿದೆ ಬ್ರೀಟೀಷರ ದಂಡು.!
ಜಗಕೆ ಕ್ರಿಕೆಟ್ ಕಲಿಸಿದ ಆಂಗ್ಲರೇ ಅಯೋಮಯ
ಐದುದಿನಗಳಾಟ ಎರಡೇದಿನದಲ್ಲಿ ಮುಕ್ತಾಯ.             

               🔆🔆🔆

    ✍️ ಎ.ಎನ್.ರಮೇಶ್. ಗುಬ್ಬಿ.