ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿ
ಪವಿತ್ರ ಹಾಲಿಗೆ ವಿಷವು ಬೆರೆತಿದೆ ಸಖಿ
ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕು
ಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ
ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆ
ಬಡವರ ಮನೆ ದೀಪಕೆ ಎಣ್ಣೆಗಿಲ್ಲದೆ
ಸಾಯುತಿದೆ ಸಖಿ
ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದು
ಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ
ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿ
ನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ
🔆🔆🔆
✍️<strong>ಮರುಳಸಿದ್ದಪ್ಪ ದೊಡ್ಡಮನಿ</strong>
ಹುಲಕೋಟಿ