ಮುಗ್ಧ ಮನವು ನೊಂದಾಗ
ಹೂ ಹೃದಯ ಶಿಲೆಯಾಯಿತು
ಕಣ್ಣಿನಿಂದ ಕಂಬನಿ ಜಾರಿದಾಗ
ಕಣ್ಣರೆಪ್ಪೆ ಸಾಂತ್ವನ ಹೇಳಿತು
ಮಾಡದ ತಪ್ಪಿಗೆ ಗುರಿಯಾದಾಗ
ಸಿಕ್ಕಂತ ಪ್ರೀತಿಯು ಮುದುಡಿತು
ಹೆಸರಾದ ಉಸಿರು ದೂರಾದಾಗ
ಹಿಗ್ಗಿದ ಮನ ಸದ್ದಿಲ್ಲದೇ ಕುಗ್ಗಿತು
ಕಣ್ಣೀರಿಗೆ ಬೆಲೆಯು ಇಲ್ಲವಾದಾಗ
ಕಣ್ಣಿನ ಕಡಲು ಬತ್ತಿ ಹೋಯಿತು
ಕನಸಿನ ದೋಣಿ ಮುಳುಗಿದಾಗ
ಸಜೀವ ದೇಹ ನೊಂದು ತೇಲಿತು
🔆🔆🔆
✍️ ಶ್ರೀಮತಿ ಸುಧಾ ಕಂದಕೂರ, ಹುಬ್ಬಳ್ಳಿ