ಅಡುಗೆ ಮನೆಯಲ್ಲಿರುವ ಹೆಜ್ಜೆಗಳು,
ಅಡಿ ಅಡಿಗೂ ಓಡಾಡುತಿವೆ ಗಡಿಯಾಚೆಗೂ,
ಸಂಗೀತ ಸಪ್ತ ಸ್ವರಗಳ ಗೆಜ್ಜೆಗಳು, ರಾಗ ರಾಗದಿ ಮನಬೆಸೆದಿವೆ ನಾಡಿನಾಚೆಗೂ

ಬಣ್ಣದ ಕುಟುಂಬವನು ನಳನಳಿಸಿ
ಕ್ಷಣ ಕ್ಷಣವೂ ಬೆಳದಿಂಗಳಿನ ತಣ್ಣ ಗಾಳಿ
ಕಣ್ಣಲ್ಲಿ ಕಣ್ಣುತೆರೆಸುತ ಕಣ್ಣರಳಿಸಿ,
ಕ್ಷಣ ಕ್ಷಣದಿ ಕ್ಷಮಯಾಧರಿತ್ರಿ ರೂಪತಾಳಿ

ತೊಟ್ಟಿಲು ತೂಗುತಿರುವ ಕೈಗಳಲ್ಲಿ,
ಜಗ ಮೊಗವು ನಗುತಲಿದೆ ಬೆವರಲ್ಲಿ, ಬಟ್ಟಲು ಊಟದಲ್ಲಿರುವ ಕೈ ತುತ್ತಿನಲ್ಲಿ,
ನಿತ್ಯ ದರ್ಶನ ಭಾಗ್ಯವಿರುವ ದೇವರಿಲ್ಲಿ.

ಹೆಣ್ಣಿನ ಒಡಲಲ್ಲಿರುವ ಸಹನೆಯು,
ತಾಳಿ ತಾಳುತ ಸಮಸ್ಯೆಗಳ ಹಿಮಾಲಯ,
ಏರುತ ಕೀರ್ತಿ ಧ್ವಜದ ಪತಾಕೆಯು,
ನಿತ್ಯ ಹಾರಾಡಿ ನಿತ್ಯೋತ್ಸವದ ದೇವಾಲಯ.

ಮನೆಗೆ ಹಣತೆಯಂತೆ ತ್ಯಾಗಮಯಿ,
ಮುಖ ತೋಳಲ್ಲಿ ಭೂಮಿತೂಕದ ಶಕ್ತಿಯು,
ಸಾಗುತ ಸಂಸಾರ ರಥದಿ ಹಂಸಮಯಿ,
ನಿತ್ಯ ನಮಗಾಗಿ ಹೊಸಚಿಗುರಿನ ಪ್ರಕೃತಿಯು.

🔆🔆🔆

✍️ ರಾಮಚಂದ್ರ. ದುಂಡಪ್ಪ. ಪತ್ತಾರ. ಶಿಕ್ಷಕರು ಸ. ಹಿ. ಪ್ರಾಥಮಿಕ ಕನ್ನಡ ಶಾಲೆ ನೇಕಾರನಗರ ಹಳೇ ಹುಬ್ಬಳ್ಳಿ. ಹುಬ್ಬಳ್ಳಿ