ಕೋಪದಲ್ಲಿ ಮಲಗಿದ್ದೆ ಅಂದು ನಾನು
ಬೈದಿದ್ದ ಅಮ್ಮ ಅಂದುಕೊಂಡಳು ಬೇಜಾರ್ ಆಯ್ತೇನೋ
ಮೆಲ್ಲಗೆ ನೋಡಿದರೆ ತಮ್ಮನ ಕಣ್ವೊದ್ದೆ
ಅದ ಲೆಕ್ಕಿಸದೆ ನಾ ಮಾಡಿದೆ ನಿದ್ದೆ

ಹಾಗೆ ಮಲಗಿದ್ದ ನನಗೆ ಬಿತ್ತೊಂದು ಸುಂದರ ಕನಸು ಅದ್ಭುತ ಜನಸಾಗರದಲ್ಲಿ ಸೇರಿತ್ತು ನನ್ನ ಮನಸ್ಸು ಜ್ಞಾನಪೀಠ ಪ್ರಶಸ್ತಿ ಎಂಬ ಹೆಮ್ಮೆಯ ಗರಿಗೆ ಸೇರಿತ್ತು ಅಂದು ನನ್ನ ಸಾಧನೆಯ ಮುಡಿಗೆ

ಕುವೆಂಪು, ಕಾರಂತ ಅವರ ಹೆಸರ ಕೆಳಗೆ
ನನ್ನ ಹೆಸರು ಬಂದಿತ್ತಲ್ಲ ಎಂಬ ಹೆಮ್ಮೆ ನನಗೆ ನಡೆಯಿತು ಅದ್ಭುತ ಸನ್ಮಾನದ ಭರಪೂರಣಿಗೆ ಎಲ್ಲೆಲ್ಲೂ ಶಿಳ್ಳೆ ಚಪ್ಪಾಳೆ ಮೆರವಣಿಗೆ

ಕೈಕುಲುಕಿ ಶುಭಾಶಯ ಹೇಳಿದರು ನೂರಾರು ಜನರು
ಬಿಗಿದಂತಿತ್ತು ಸಂತೋಷದಲ್ಲಿ ನನ್ನುಸಿರು
ಇಂತಹ ಸಾಧನೆ ಎಲ್ಲರ ಹೆಮ್ಮೆ ಎಂದರು
ನನ್ನ ಹೊಗಳಿಕೆಯ ಭಾಷಣವೇ ಬಿಗಿದರು

ಖುಷಿಯಲ್ಲಿ ನಾನು ಎದ್ದೆದ್ದು ಕುಣಿದೆ
ಕುಣಿಕುಣಿದು ನಾನು ಮಂಚದಿಂದ ಕೆಳಗೆ ಬಿದ್ದೆ
ಎಚ್ಚರಗೊಂಡ ಏನಾಯಿತೆಂದು ಕೇಳಲು
ಕನಸು ಎಂದು ಗೊತ್ತಾಗಿ ನಾ ಪ್ರಾರಂಭಿಸಿದೆ ಜೋರಾಗಿ ಅಳಲು…

🔆🔆🔆

✍️ ಮಂಜುಳ ಜೈನ್
ಎಸ್ ಡಿ ಎಂ ಕಾಲೇಜು, ಉಜಿರೆ