ನಿನ್ನಾಸೆಗೆ ಮೋಸವಾಗಿದ್ದರೆ ಕ್ಷಮಿಸಿ ಬಿಡು
ನಿನ್ನ ಕನಸಿಗೆ ಕೈ ಕೊಟ್ಟಿದ್ದರೆ ಕ್ಷಮಿಸಿ ಬಿಡು
ಇರುಳ ನೆನಪಲಿ ಮುಳ್ಳನಿಟ್ಟಿದ್ದರೆ ಕ್ಷಮಿಸಿ ಬಿಡು
ಕೋಪದಲಿ ಹೃದಯವನು ಚಿವುಟಿದ್ದರೆ ಕ್ಷಮಿಸಿ ಬಿಡು
ಕಾರಣವಿಲ್ಲದೆ ಸನಿಹ ಬಂದಿದ್ದರೆ ಕ್ಷಮಿಸಿ ಬಿಡು
ನಿನ್ನಿಂದಗಲಿ ಮತ್ತೆ ನೋಯಿಸಿದ್ದರೆ ಕ್ಷಮಿಸಿ ಬಿಡು
ಸರಸದ ಸಲ್ಲಾಪ ಹುಳಿಯಾಗಿದ್ದರೆ ಕ್ಷಮಿಸಿ ಬಿಡು
ವಿರಸವನು ಎದೆಯಲ್ಲಿ ತುಂಬಿದ್ದರೆ ಕ್ಷಮಿಸಿ ಬಿಡು
‘ಆರಾಧ್ಯೆ’ ಪ್ರೀತಿ ಕಡಲ ನೀಡದಿದ್ದರೆ ಕ್ಷಮಿಸಿ ಬಿಡು
ದೋಣಿ ದಡ ಸೇರದೆ ಮುಳುಗಿಸಿದ್ದರೆ ಕ್ಷಮಿಸಿ ಬಿಡು
🔆🔆🔆
✍️ ಶ್ರೀಮತಿ ಗಿರಿಜಾ ಪಾಟೀಲ ಸಂಸ್ಥಾಪಕ ಅಧ್ಯಕ್ಷರು, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ವಿಜಯಪುರ