ಸ್ತ್ರೀ ಸಬಲೀಕರಣ ಎಂದಾಗೆಲ್ಲ ಒಕ್ಕೊರಲಿನಲ್ಲಿ ವಾಗ್ವಾದ ನಡೆಸುವ ನಾವು ನಮ್ಮ ಮನೆಗಳಲ್ಲಿ ಆಕೆಯ ಭಾವನೆಗಳಿಗೆ ಬೆಲೆ ಕೊಡುತ್ತಿದ್ದೇವಾ ಎಂಬ ಪ್ರಶ್ನೆ ಸದಾ ನನ್ನನು ಚುಚ್ಚುತ್ತದೆ.

ಅಡುಗೆ ಕೋಣೆಯೇ ಹೆಣ್ಣಿನ ಪ್ರಪಂಚ , ಮನೆಯ ಹೊಸ್ತಿಲು ಲಕ್ಷ್ಮಣ ರೇಖೆ ,ಉಪ್ಪು ಹುಳಿ ಖಾರದಿ ತೋರುವ ಚಮತ್ಕಾರ ಅವಳ ಕಲೆ ಎಂಬೆಲ್ಲ ಮೌಢ್ಯ ಅಂದಿತ್ತು. ಇಂದು ಹೆಣ್ಣು ಸಮಾಜದ ಕೆಂಗಣ್ಣುಗಳೇ ಬೆರಗಾಗುವಂತೆ ಕಟ್ಟುಪಾಡುಗಳನ್ನು ಮೀರಿ ‘ನಾನು ಸಮಾನಳಲ್ಲ….ಪುರುಷನಿಗಿಂತ ಸಮರ್ಥಳು’ ಎಂಬುದನ್ನ ನಿರೂಪಿಸಿದ್ದಾಳೆ.
ಆದರೂ ಸಂಸಾರ ನೌಕೆಯನ್ನು ಮುನ್ನಡೆಸುವ ಹೊಣೆ ಹೊತ್ತವಳು ಇಂದಿಗೂ ತಾಯಿ ತಾನೇ.
ಸೂರ್ಯನಿಗೇ ಗುಡ್ ಮಾರ್ನಿಂಗ್ ಹೇಳುವ ಮೂಲಕ ದಿನಚರಿ ಪ್ರಾರಂಭಿಸಿ , ಮನೆಗೆಲಸ , ಮೇಯುವಿಕೆಗೆ ಮೃಷ್ಟಾನ್ನ , ಮನೆಯವರ ಬೇಡಿಕೆಗಳಿಗೆಲ್ಲ ಒತ್ತು ಕೊಟ್ಟು ನಂತರ ಮುಂದಿನ ನಿಲ್ದಾಣವಾದ ಆಫೀಸಿನತ್ತ ಓಟ.
ಕುಟುಂಬ ಹಾಗು ವೃತ್ತಿಯನ್ನು ಬದುಕೆಂಬ ತಕ್ಕಡಿಯಲ್ಲಿ ಸರಿದೂಗಿಸಿಕೊಂಡು ಮುನ್ನಡೆಯುವ ಕ್ಯಾಪ್ಟನ್.ಒತ್ತಡಗಳ ಒಳಹೊಕ್ಕು ವಿಶ್ರಾಂತಿ ಬಯಸುವಾತ ಹೆಣ್ಣನ್ನು ತನಗಾಗಿ ದುಡಿಯುವ ಯಂತ್ರ ಎಂದುಕೊಂಡಿರುವನೋ..?
ಆದುನಿಕ ಮಹಿಳೆ ಎಂಬ ಹೆಗ್ಗಳಿಕೆ ಇಂದಿನ ಮಹಿಳೆಗೆ ಗೆಲುವಿನ ಗರಿಯಾದರೂ ಅದರ ಹಿಂದೆ ಅವಳೆಷ್ಟು ನೋವನುಭವಿಸುವ ಳೆಂದು ಆಕೆಗಷ್ಟೇ ಗೊತ್ತು.ಚುಚ್ಚು ನುಡಿ, ಕೆಟ್ಟ ದೃಷ್ಟಿ,ಅನುಮಾನ , ಬೆಟ್ಟದಷ್ಟು ದೈಹಿಕ ಮಾನಸಿಕ ಭಾರಗಳನ್ನು ಹೊತ್ತು ನಗುಮುಖದಿ ಯಾವದೇ ದೂರಿಲ್ಲದೆ ಸಾಗುವುದು ಸುಲಭವೇನಲ್ಲ.

ಹೆಣ್ಣನ್ನು ಭೂಮಿ ,ಜಲ ,ವಾಯು ಹಾಗೂ ಇನ್ನಿತರ ಸೃಷ್ಟಿಯ ಶ್ರೇಶ್ಟತೆಗಳಿಗೆ ಹೋಲಿಸುವ,ದೇವರೆಂದು ಪೂಜಿಸುವ ಸಮಾಜ ಓರೆಗಣ್ಣಿನ ನೋಟ ಬಿಟ್ಟು ಪ್ರೋತ್ಸಾಹಿಸುವ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ನೊಂದಾಗ ಮಿಡಿಯುವ ಮನಕ್ಕೆ ಎಂದಾದರೂ ಸಾಂತ್ವಾನ ಹೇಳಬೇಕೆಂದು ತೋರಿದ್ದುಂಟೇ!? ರುಚಿ ಬಡಿಸುವ ಕೈಗಳಿಗೆ ಸಹಾಯಮಾಡುವ ಸುಖದ ಅರಿವಿದೆಯೇ..?ನಿಷ್ಕಲ್ಮಶ ಶಿಶುವಿನಂತೆ ಅಮ್ಮನ ಬಳಿ ಕುಳಿತು ಮಾತಲ್ಲೇ ಜಗವ ಮರೆಯಬೇಕು….ಅಮ್ಮನ ಮಡಿಲಿನ ಸ್ವರ್ಘ ಮರೆತು ಹೋಯಿತ? ಇಂತಹಾ ಪ್ರಶ್ನೆಗಳು ಸದಾ ಕಾಡುವುದುಂಟು. ವಾಸ್ತವತೆಯ ಚಿತ್ರಣ ಎದುರಿದ್ದಾರೂ ಅರಿವಿನ ಅಲೆಗಳು ಕ್ಷಣಿಕ.ತಕ್ಷಣ ಎಲ್ಲವನ್ನೂ ಮರೆತು ಅಮ್ಮನ ಮೇಲೆ ರೇಗುವವರು ನಾವೇ.

ಹಾಸ್ಟೆಲ್ ಹಾದಿಹಿಡಿದಾಗ ನಾಲಿಗೆ ಬಯಸುವುದು ಅಮ್ಮನ ಕೈರುಚಿ.ಬಣ್ಣ ಕಳೆದುಕೊಂಡ ಬಟ್ಟೆ ಮೈಮೇಲೆ ಸಿಂಗರಿಸುವಂತೆ ಬದಲಾಯಿಸುವುದು ಆ ಕೈಗಳು.ಮರೆತದ್ದನ್ನು ನೆನಪಿಸಿ,ಬೋಧಿಸಿ, ಜವಾಬ್ದಾರಿ ಎಂಬ ಭಾರ ಹೊತ್ತು ಪ್ರೀತಿಯೆಂಬ ತುತ್ತನ್ನು ಉಣಬಡಿಸುವಾಕೆ ಸದಾ ನಗುಮುಖದ ಒಡನಾಟ ಬೆಂಬಲವಾಗಿ.

ಬದುಕಿಗೆ ರೂಪನೀಡಿದವಳಿಗೆ, ಸೈಂತೈಸುವ ಒಡಹುಟ್ಟಿದೋಳಿಗೆ,ಸಂಚರಿಸುವ ಸ್ನೇಹಿತೆಗೆ , ಅರ್ಧಾಂಗಿಗೆ , ಕಂಬನಿ ಒರೆಸೊ ಮಗಳಿಗೆ ಸ್ವಾತಂತ್ರ್ಯ ಎಂಬ ರೆಕ್ಕೆ ಕಟ್ಟೋಣ, ಕನಸಿನ ಹಾಡಿಗೆ ಹೂ ಹಾಸೋಣ.

🔆🔆🔆

✍️ ಪೌದನ್ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್. ಕಾಲೇಜ್, ಉಜಿರೆ