ಬಂದೆ ನೀ ನನ್ನ ಬಾಳಿಗೆ
ಶಿಶಿರ ಋತುವು ಬಂದಂತೆ
ತಂದೆ ಖುಷಿ ನನ್ನ ಪಾಲಿಗೆ
ತಂಗಾಳಿ ಎಲ್ಲೆಡೆ ಪಸರಿದಂತೆ
ನಿನಗೇನು ಹೆಸರಿಡಲಿ
ನಿನಗಾವ ಸ್ಥಾನ ಕೊಡಲಿ
ಗೆಳೆಯನೆಂದೆ, ಸಹೋದರನೆಂದೆ,
ಅಜಾತ ಬಂಧುವೆಂದೆ
ಅದಾವ ಪದದ ಪರಿಧಿಯು ಸಂಬಂಧದ ಮಿತಿಯ ಮೀರಿದ
ನಿನ್ನ ಮಾನವತೆಯ ಎದಿರು ತಲೆ ಬಾಗುವುದು ಗೌರವದಿ
ಏನಾ ಕಂಡು ಮೆಚ್ಚಿದೆ ನನ್ನ
ನಗು ಬಂತೆ ಕೇಳಿ
ನಿನಗೆ ನಗು
ಬರುವುದು ಸಹಜ
ನನ್ನ ಬಾಲಿಶತೆ
ನೀ ಮೆಚ್ಚಿದೆಯಾ
ತಡೆಯಿಲ್ಲದ ಮಾತು
ನಿನ್ನ ಸೆಳೆಯಿತೆ
ಹೊರ ಚಿಮ್ಮುವ
ನಗೆಗೆ ಮರುಳಾದೆಯಾ
ಮನದ ಮೌನತೆಗೆ
ಬೆರೆಗಾದೆಯಾ
ಹೇಳು ನಿನ್ನ ಭಾವನೆಯಾ
ನನ್ನ ಮನದ ಮಿಡಿತವ
ತಿಳಿವ ನಿನಗೆ
ಯಾವ ಸ್ಥಾನ ಕೊಡಲಿ
🔆🔆🔆
✍️ ವಾಣಿ ಶೆಟ್ಟಿ ಮುಂಬಯಿ.