ನಿನಗೆ ಉಡಲು ಬಟ್ಟೆ ಇಲ್ಲದಿದ್ದರೂ,
ನಿನ್ನ ಮಗುವಾದ ನನ್ನು ರಕ್ಷಿಸಲು
ಮೈಮೇಲೆ ಬಟ್ಟೆಯನ್ನು ಹಾಕಿದೆ….
ನಿನಗೆ ಉಣ್ಣಲು ಅನ್ನವಿಲ್ಲದಿದ್ದರೂ
ನನ್ನ ಹಸಿವಿನ ಬಾಧೆಯನ್ನು ನೀಗಿಸಲು
ಎಲ್ಲರೊಡನೆ ಕಾಡಿಬೇಡಿ ಊಟ ಹಾಕಿದೆ….
ನಿನಗೆ ಅಮ್ಮನ ಪ್ರೀತಿಯೆಂದರೇನು
ಎಂದು ತಿಳಿಯದಿದ್ದರೂ,
ನನಗೆ ಅಮ್ಮನ ಕೊರತೆಯನ್ನು ನೀಗಿಸಿದೆ….
ನೀನು ಎಷ್ಟೇ ದುಃಖವನ್ನು ಅನುಭವಿಸುತ್ತಿದ್ದರೂ,
ನನ್ನ ಮುಖದಲ್ಲಿನ ಮುಗ್ಧ ನಗುವನ್ನು
ನೋಡಲು ಕಾತುರದಿಂದ ಕಾಯುತ್ತಿದ್ದೆ…..
ನನ್ನೊಳಗೆ ಎಷ್ಟೇ ಸಂತೋಷವಿದ್ದರೂ,
ಆ ಎಲ್ಲಾ ನಗುವಿನಲ್ಲಿಯೂ ನಿನ್ನ ಪರಿಶ್ರಮ ಇದೆ…
🔆🔆🔆
✍️ ಆಕರ್ಷಾ ಆರಿಗ
ಎಂ.ಸಿ.ಜೆ. ವಿದ್ಯಾರ್ಥಿನಿ ಎಸ್.ಡಿ.ಎಂ.ಕಾಲೇಜು, ಉಜಿರೆ