ನನ್ನ ಸುತ್ತಮುತ್ತಲಿವೆ
ಎಷ್ಟೊಂದುಬಣ್ಣಗಳು
ಅವು ಸಂತಸದಿ
ನಗುವುದ ಕೇಳಬಲ್ಲೆ

ಅಮೂಲ್ಯ ಪುಸ್ತಕವಿರಲಿ
ಅಳಿರವಿದ ಪತ್ರಿಕೆಯಿರಲಿ
ಎಷ್ಟು ವೈವಿಧ್ಯಮಯ ಬಣ್ಣಗಳು
ಅಮೋಘ ಮತ್ತು ಅಮರ ಅವು

ಅವು ಪಿಸುಗುಡುವುದ
ಪ್ರೀತಿಯಲಿ ಕೇಳಬಲ್ಲೆ
ಏಕೆಂದರೆ ಪ್ರತಿಯೊಂದರೊಂದಿಗೂ
ನನ್ನಾತ್ಮದ ಬಂಧವಿದೆ

ನಾನೂ ಅವರಂತೆಯೇ ಇರುವೆ
ಎಂದೂ ಬದಲಾಗಿಲ್ಲ
ಇಬ್ಬರೂ ಒಬ್ಬರನ್ನೊಬ್ಬರು
ಹೊಂದಿಸಿಟ್ಟುಕೊಳ್ಳುತ್ತೇವೆ

ಅವುಗಳಲ್ಲಿ ಕೆಲವು
ನಿಜಕ್ಕೂ ಹಳೆಯವು
ಆದರೂ ಹೆಮ್ಮೆ ಪಡುವಂಥವು
ಆಕ್ರೋಶಭರಿತ ಧೈರ್ಯಶಾಲಿಗಳು

ಮರೆತು ಹೋದ ಚರಿತ್ರೆಯ
ನೆನಪಿಸುವವು ಕೆಲವು
ಹಲವು ಆಕರ್ಷಿಸುವವು
ವಿವರಣೆಗೆ ದಕ್ಕದ ವಿಸ್ಮಯದಿ

ವಿಜ್ಞಾನದ ಬಗ್ಗೆ ಮಾತಾಡುವವು
ಪ್ರೀತಿಯ ಸಾಹಿತ್ಯದ ಬಗೆಗೆ ಉಲಿಯುವವು
ಭಾವಪರವಶಗೊಳಿಸುವ
ಅಪ್ಪಟ ಕಥೆಗಳು ಕೆಲವು

ನಾವು ಒಟ್ಟಿಗಿದ್ದು
ದಶಕಳೇ ಸಂದವು
ನಮ್ಮಿಬ್ಬರ ಸಂಬಂಧಕ್ಕೆಂದೂ
ಧೂಳು ಹತ್ತಲು ಬಿಡೆವು

ನಾನು ನನ್ನಾತ್ಮದ ಬಣ್ಣಗಳ
ಪ್ರತಿ ಪುಸ್ತಕಕೂ ನೀಡಿರುವೆ
ಹಾಗಾಗಿ ನಾನು ಅವರೊಡನಿದ್ದಾಗ
ಹೀಗೆ ಕಾಣುವೆ.

🔆🔆🔆

ಇಂಗ್ಲಿಷ್ ಮೂಲ:ಅನಿರ್ಭನ್ ರಾಯ್ ✍️ಕನ್ನಡಕ್ಕೆ – ಕವಿತಾ ಹೆಗಡೆ