ಸಮಾಜವು ಮೊಬೈಲ್ ಮಯವಾಗಿದೆ. ದಿನದಿಂದ ದಿನಕ್ಕೆ ಮಾರುಕಟ್ಟೆಗಳಿಗೆ ಬರುತ್ತಿರುವ ಹೊಸ ಹೊಸ ಮಾಡೆಲ್ ಗಳು ,ಆಪ್ ಗಳು ಜನರನ್ನು ಆಕರ್ಷಿಸು ತ್ತವೆ.ಮೊದಲಿನ ಕ್ಯಾಮೆರಕ್ಕೂ ಈಗಿನ ಕ್ಯಾಮರಕ್ಕೂ ತುಂಬಾ ವ್ಯತ್ಯಾಸವಿದೆ. ಇಂದಿನ ಲ್ಯಾಪ್ ಟ್ಯಾಪ್, ಮೊಬೈಲ್ ಗಳಲೆಲ್ಲಾ ಕ್ಯಾಮೆರಾ ಎಂಬ ಮಹಾರಾಜ ಎದ್ದೇ ಇರುತ್ತಾನೆ.ಅದರಲ್ಲೂ ಕೂಡ ಬೇರೆ ಬೇರೆ ರೀತಿಯ ಕ್ಯಾಮೆರಾ ಗಳ ಆಪ್ ಗಳು ಬಂದಿವೆ. ತಮ್ಮ ಮುಖವನ್ನು ತಾವೇ ಹೇಗೆಗೋ ಮಾಡಿಕೊಂಡು ಫೋಟೋ ತೆಗೆದುಕೊಂಡು ಮರು ಅದನ್ನು ನೋಡುವುದು ಮೋಜಿನ ವಿಷಯವಾಗಿದೆ.
‘ಅತಿಯಾದರೆ ಅಮೃತವು ವಿಷ’ ಎಂಬ ಗಾದೆಯಂತೆ ಈ ಸೆಲ್ಫಿ ಕ್ರೇಝಿಯು ಜಾಸ್ತಿಯಾದರೂ ಮರಣವು ಕಟ್ಟಿಟ್ಟಬುತ್ತಿ. ಇದಕ್ಕೆ ಎಷ್ಟೋ ಉದಾಹರಣೆಗಳು ಇವೆ.ಮಳೆಗೆ ಬಂದಿರುವಂತಹ ತೊರೆಗಳ ಬಳಿ ಹೋಗಿ ಗುಂಪಲ್ಲಿ ಸೆಲ್ಫಿ ತೆಗೆಯುತ್ತಾ ಕಾಲು ಜಾರಿ ಬಿದ್ದ ಘಟನೆಯು ಹೆಚ್ಚಾಗಿದೆ,ಜೋಗ ಜಲಪಾತದ ತುದಿಯಲ್ಲಿ ಇಬ್ಬರು ಕುಡುಕರು ತೇಲಾಡಿ ಸೆಲ್ಫಿಯನ್ನು ತೆಗೆಯುವ ಭರದಲ್ಲಿ ಕೆಳಗೆ ಬಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿತ್ತು.

ಈಗಂತೂ ಸೆಲ್ಫಿಗಳಲ್ಲಿ ನಾಯಿ,ಬೆಕ್ಕು ಹೀಗೆ ಮುಂತಾದ ಪ್ರಾಣಿಗಳ ಮುಖವು ನಮ್ಮ ಮುಖಕ್ಕೆ ಅಳವಡಿಸಿಕೊಳ್ಳುವ ಆಪ್ಗ ಗಳು ಇವೆ ಎಲ್ಲರೂ ಪ್ರಾಣಿಗಳಂತೆ ಆಡುತ್ತಿರು ವುದು ಒಂದು ರೀತಿಯಲ್ಲಿ ಜೋಕಿನ ವಿಷಯವಾದರೆ ಅದೇ ಧುರ್ಘಟನೆಗೆ ದಾರಿಗೀಡಾಗುತ್ತದೆ.ಪ್ರಪಂಚದಲ್ಲಿ ಯಾವ ಮೂಲೆಯಲ್ಲಿ ಹೇಗಿದ್ದರೂ ,ಆಕ್ಸಿಡೆಂಟ್ ಆಗಿ ಮಲಗಿದ್ದರೂ ಅದರ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಲೈಕ್ಸ್, ಕಮೆಂಟ್ ಗಳಿಗಾಗಿ ಕಾಯುವಷ್ಟು ಜಗತ್ತು ಮೂರ್ಖವಾಗುತ್ತಿದೆ. ಸೆಲ್ಫಿಯಲ್ಲಿ ರುವಂತಹ ಯೋಚನೆ ಗಳು ನಮ್ಮ ದೇಶದ ಮೇಲಿದ್ದರೆ ಎಷ್ಟೋಅಭಿವೃದ್ಧಿಯಾಗುತ್ತಿತ್ತು.

ವೈಜ್ಞಾನಿಕ ವಾಗಿ ಸೆಲ್ಫಿ ಪ್ರತಿ ದಿನ ತೆಗೆಯುವು ದರಿಂದ ತೊಂದರೆ ಆಗುತ್ತದೆ. ಮುಖವು ಬೇರೆ ಬೇರೆ ಆಕಾರಕ್ಕೆ ಬದಲಾಯಿಸುವುದ ರಿಂದ ಮಾನಸಿಕವೂ ಆಗವುದುಂಟು. ಆದ್ದರಿಂದ ಸೇಲ್ಫಿ ಜೀವನದಲ್ಲಿ ಇರಲಿ,ಜೀವನವೇ ಸೆಲ್ಫಿಯಾಗಬಾರದು.

            🔆🔆🔆                                                 

✍️ ಕು. ಹರ್ಷಿತ ಹೆಬ್ಬಾರ ಪ್ರಥಮ ಎಂ.ಸಿ.ಜೆ ವಿದ್ಯಾರ್ಥಿನಿ ಎಸ್.ಡಿ‌. ಎಮ್.ಕಾಲೇಜು,ಉಜಿರೆ