ನಗೆಯೆಂಬ ಬೆಳಕು ಚೆಲ್ಲು
ಹಗೆಯ ಅಂಧಕಾರ ಮೆಲ್ಲುತ
ತಗಾದೆ,ಇರಾದೆ ಹಂಗಿಲ್ಲದೇ
ನೆಮ್ಮದಿಯ ತಾಣಕೆ ರೂಪಾಂತರಿಸಿ.

ಹತಾಶೆಯ ಕೊರಳಿಗೆ ಚೈತನ್ಯದ ದನಿ
ಚಿಂತೆಯ ಸುಟ್ಟು ಬೂದಿಯಾಗಿಸುತ
ಗೊಂದಲದ ಬೇ-ಸೂರ್ ಬೇಸರಿಸಿ
ಚೇತರಿಕೆಯ ಬಾಗೀನ ನೀಡುವಂತೆ.

ಮರಭೂಮಿಯ ಖರ್ಜೂರ ಫಲದಂತೆ
ಚೂರಾದ ಹೃದಯದಿ ಬೆಸುಗೆ ಔತಣ ಮಾಡಿ
ನಂಬಿಕೆಗೆ ಧೋಕಾ ಮಾಡಿದವರಿಗೆ ಸವಾಲೆಸೆದು
ಜಾರಿದ ಕಣ್ಣ ಹನಿಗೂ ನಾಚಿಕೆ ತಾಗಿದಂತೆ.

                 🔆🔆🔆

✍️ ರೇಷ್ಮಾ ಕಂದಕೂರ ಶಿಕ್ಷಕಿ‌, ಸಿಂಧನೂರ