೧.ಕಲ್ಪನೆಯ ಕನಸು..!
ಕೆಲವೊಂದು ಕನಸುಗಳು
ಕಲ್ಪನೆಯಲ್ಲಿಯೇ ಇರಲಿ
ಆ ಕನಸುಗಳು ನನಸಾದರೆ
ಮೂರನೇ ಮಹಾಯುದ್ಧ ಖಚಿತ.
🔅🔅
೨.ಸುಳ್ಳು ನೆಮ್ಮದಿ..!
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
ಎನ್ನುವ ಶಾಸ್ತ್ರ
ಜೀವನದ ಎಲ್ಲ ಸಂಕಟಗಳಲ್ಲಿ
ನೆಮ್ಮದಿ ಕೊಡುವುದಿಲ್ಲ.
🔅🔅
೩.ಪರಿಚಯ..!
ಕನ್ನಡಿಯಲ್ಲಿ ನೋಡಿದಾಗ ಅರ್ಥವಾಯಿತು
ಕಾರ್ಯಕ್ರಮದಲ್ಲಿ ನನ್ನನ್ನು ಪರಿಚಯಿಸಿದವರು ಕುರುಡ ಅಂತ.
🔅🔅
೪.ಅವನು..!
ಇದೆಲ್ಲವೂ ನನ್ನಿಂದಲೇ,
ಅದೆಲ್ಲವೂ ನಿನ್ನಿಂದಲೇ,
ಮಿಕ್ಕಿದೆಲ್ಕವೂ ಅವರಿಂದಲೇ,
ಮತ್ತು ನಾವೆಲ್ಲರೂ ಅವನಿಂದಲೇ.
🔅🔅
೫.ಕಲ್ಪನೆ..!
ಮಿತಿಮೀರಿದ ಕಲ್ಪನೆ
ಮಿತಿಮೀರಿದ ಮಳೆಯಂತೆ
ಜೀವನದಲ್ಲಿ ಅತಿಯಾದ ಕಲ್ಪನೆಗಳು
ಅತಿವೃಷ್ಠಿಗೆ ಕಾರಣ.
🔆🔆🔆
✍️ಓಂಕಾರ ಕುಡಚೆ.ಬೆಳಗಾವಿ