ಯಾಕ್ ಬೇಕಿತ್ತೋ ತಾತಾ ನಿಂಗ್
ಈ ದೇಶದ ಇಲ್ಲದ್ ಉಸಾಬರಿ
ನೀ ಹೇಳಿದ್ದ್ ಒಂದೂ ನಡೆದಿಲ್ಲ ಬರೋಬ್ಬರಿ
ಅದಕ್ ಕೊಂದ್ರ ನಿನ್ನ ತರಾತುರಿ….
ಏಲ್ಲೈತಿ ನೀ ಅಂದಿದ್ದ್ ಶಾಂತಿ ಶಾಂತಿ
ಆಗ ಬಂದೈತಿ ಅದೂ ನಿನ್ನ ಜೊತಿ
ಹೊತ್ತಿ ಉರ್ಯಾಕತ್ತೈತಿ ಜಾತಿ ಜಾತಿ
ನೋಡಕೊಂತ್ ಕುಂತಾವು ನಿನ್ನ ಮೂರು ಕೋತಿ….
ಈಗ ಇಲ್ಲಿ ನಿನ್ನ ಹೆಸರ್ ಅಷ್ಟ ಉಳದೈತಿ ಗಾಂಧಿ
ಅತ್ಯಾಚಾರ ನಡಿಯಾಕ್ಕ ತಾವು ಸಂದಿಗೊಂದಿ
ಇನ್ನೂ ಸುಧಾರಿಸಿಲ್ಲ್ ನೋಡ್ ನಮ್ಮಂದೀ
ಆಯಕೊಂತ್ ಕುಂತಾರ್ ಇನ್ನು ಚಿಂದಿ….
ಸ್ವಾತಂತ್ರ್ಯಕ್ಕಾಗಿ ಅಡ್ಡಾಡಿದೀ ನೀ ಬತ್ತಲಿ
ಇನ್ನು ಹಂಗ್ ಐತಿ ಬೆಳಕಿಲ್ಲದ ಕತ್ತಲಿ
ಎಲ್ಲಿ ಐತಿ ನೀ ಕೊಟ್ಟ ಸ್ವಾತಂತ್ರ್ಯ
ನಮ್ಮಬಾಳೇವ್ ಆಗೇತಿ ಅತಂತ್ರ….
🔆🔆🔆
✍️ ಶ್ರೀ ಮಲ್ಲಿಕಾರ್ಜುನ ಕಡಕೋಳ
ಮಹಾತ್ಮಾ ಗಾಂಧಿಯವರನ್ನು ವಿಲನ್ ರೀತಿಯಲ್ಲಿ ತೋರಿಸುತ್ತಿರುವವರ ಕೈಯಲ್ಲಿ ಆಡಳಿತ ಸಿಕ್ಕಿರುವುದು ದುರದೃಷ್ಟಕರ
LikeLiked by 1 person