ಮನುಷ್ಯಾಗ್ ಮನಷ್ಯಾ ಬೇಕು
ಎನ್ ಕಟಗೊಂಡ್ ಹೋಗುದೈತಿ
ಗೂಗಿ ಹಂಗ್ ಒಂದ ಇದ್ರೈನೈತಿ
ಬಂಧು ಬಳಗ ಇರಬೇಕು ಜೊತಿಗಿ…

ಬಾಳ ಗಳಿಸಬೇಕಂತಿರಿ
ಅದನ್ನೆಲ್ಲ ನೀವೇಲ್ಲಿ ತಗೊಂಡ ಹೊಕ್ಕಿರಿ
ಯಾರದರ ತಲಿ ಒಡದ್ ಬದಕಬ್ಯಾಡರಿ
ನಿಮ್ಮದಷ್ಟ ನಿಮಗ್ ಉಳಿತೈತಿ….

ಇದ್ದಾಗನೂ ಜನಾ ಇರಬೇಕು
ಸತ್ತಾಗನೂ ಹೊರಾಕ್ ನಾಕ್ ಜನಾ ಬೇಕು
ಏನ್ ತಗೊಂಡ ಹೋಗುದೈತಿ
ಎಲ್ಲಾ ಇಲ್ಲೇ ಬಿಟ್ಟು ಹೊಕ್ಕಿರೀ…

ಇವತ್ತು ದುಡ್ಡ ಬರತೈತಿ ಹೊಕ್ಕತಿ
ಇದ್ದದ್ದರಾಗ ಹಂಚಗೊಂಡ ತಿನ್ನಿರಿ
ಬಡವ ಇದ್ದರೂ ಅಲ್ಲೇ ಹೊಕ್ಕಾನು
ಶ್ರೀಮಂತ ಇದ್ದರೂ ಅಲ್ಲೇ ಹೊಕ್ಕಾನು…..

                🔆🔆🔆

✍️ ಶ್ರೀ ಮಲ್ಲಿಕಾರ್ಜುನ ಕಡಕೋಳ.