ಬರೆಯಲು ಮನಸ್ಸಿಲ್ಲ ಬರೆಯದೆ ದಾರಿಯಿಲ್ಲ
ಬರೆಯಲು ಕೂತರೆ ಅವನದೆ ಯೋಚನೆ
ಅವನ ಬಗ್ಗೆಯೇ ಬರಿಯೋಣವೆಂದರೆ ಮಾತೆ ಬರುತಿಲ್ಲ
ಆದರೂ ಬರೆಯಲೆ ಬೇಕು ನನ್ನವನ ಬಗ್ಗೆ

ಅಕ್ಷರ ವರ್ಣಮಾಲೆಯ ಅಕ್ಷರದಂತೆ ಅವನ ನುಡಿ
ಒಂದೊಂದು ವರ್ಣ ಹೇಳುವಾಗಲೂ ಸಂಗೀತದ ಸ್ವರ
ಸ್ವರದಿಂದ ಸ್ವರ ಸೇರಿ ವ್ಯಂಜನವಾಗುವಂತೆ ಇವನ
ನುಡಿಯಿಂದ ನುಡಿ ಸೇರಿ ಆಗಿದೆ ಕವಿತೆ

ಇವನ ಮಾತು ಹೇಗೆ ಮಧುರವೊ ಇವನ ನೋಟವೂ ಹಾಗೆ ಎಲ್ಲರನ್ನು ಆಕರ್ಷಿಸುವ ಕಮಲದಂತೆ
ಇವನ ನಯನಗಳು ನನಗೆ ಕನ್ನಡಿಯಂತೆ
ಇವನ ಮುಖಗಳೆ ನನಗೆ ಅದೃಷ್ಟ

ಇವನ ಪಡೆದ ನಾನು ಧನ್ಯ . ಇವನಿಗೆ ಹೇಳಬೇಕಲ್ಲವೆ
ನನ್ನ ಕೃತಜ್ಞತೆ ,
ಬರಿಯ ಮಾತಿನಲ್ಲಿ ಹೇಳಲು ಅದು ಅವನ ವ್ಯಕ್ತಿತ್ವಕ್ಕೆ ಚಿಕ್ಕದು ,
ಕವಿತೆಯಲ್ಲಿ ಹೇಳಲು ನಾನೇನು ಕವಿಯಲ್ಲ ಭಾಷಣಮಾಡಲು ರಾಜಕಾರಣಿಯಲ್ಲ ,
ರಕ್ತದಲ್ಲಿ ಬರೆಯಲು ಅಷ್ಟು ಧೈರ್ಯವೂ ಇಲ್ಲ ,
ಹಾಗಾಗಿ ಬರೆದಿರುವೆ ಈ ಕವಿತೆಯಲ್ಲಿ

               🔆🔆🔆

✍️ ಮಧುರಾ ಭಟ್ಟ , ಕುಮಟಾ