ಗೆಳೆಯ ಇಳೆಯಲ್ಲಿ..
ದೊಡ್ಡವರಾದಷ್ಟೂ
ದೂರವಾಗುತ್ತೇವೆ.!
ಹತ್ತಿರವಾದಷ್ಟೂ
ಹಗುರವಾಗುತ್ತೇವೆ.!
ಗರಿಷ್ಟರಾದಷ್ಟೂ
ಕ್ಲಿಷ್ಟರಾಗುತ್ತೇವೆ.!
ಕನಿಷ್ಟವಾದಷ್ಟೂ
ನಿಕೃಷ್ಟರಾಗುತ್ತೇವೆ.!
ಅವಿರತ
ಮಾತನಾಡಿದಷ್ಟೂ
ಕೇವಲವಾಗುತ್ತೇವೆ.!
ಅನವರತ
ಮೌನವಾದಷ್ಟೂ
ಪೇಲವವಾಗುತ್ತೇವೆ.!
ಕನಿಷ್ಟ ಗರಿಷ್ಟಗಳ
ನಡುವೆ ತೇಲಬೇಕು
ನಮ್ಮ ಬಾಳನಾವೆ.!
ಹಾಗೆ ಸಂಭಾಳಿಸಬೇಕು
ನಿತ್ಯ ನಮಗೆ ನಾವೆ.!
🔆🔆🔆
✍️ ಶ್ರೀ. ಎ.ಎನ್.ರಮೇಶ, ಗುಬ್ಬಿ