ಶೃಂಗಾರ ಲಹರಿ

ಈ ನಿನ್ನ ಶೃಂಗಾರ ಲಹರಿ
ಮಾಡಿತೆನ್ನ ಪ್ರೇಮ ಕವಿ
ಹೇಳಲೇ ಆಸೆಯ ಕೆನ್ನೆ ಸವರಿ
ನಾನಾಗಲೇ ನಿನ್ನ ಬಾಳ ರವಿ

ಪ್ರೀತಿಯ ಹೃದಯ

ಬೆಚ್ಚಗಿರಲು ಸಿರಿಯ ಅರಮನೆಯೇ ಬೇಕೆಂದೆನಿಲ್ಲ..
ಪತಿಯ ಪ್ರೀತಿಯ ಹೃದಯವೇ
ಸಾಕಲ್ಲ..

ಮಿಲನ

ನಯನಗಳು ಸೇರಿ
ಮಾಡಿವೆ ಹೃದಯಗಳ ಮಿಲನ..
ಹೃದಯಗಳೆರಡು ಸೇರಿ
ಮಾಡಿವೆ ಪ್ರೇಮಿಗಳ ಸಮ್ಮಿಲನ.

ಮಾನಿನಿಯರ(ಹೆಣ್ಣಿನ) ಬದುಕು

ತವರು ಮನೆಯಲ್ಲಿ ಪಡೆಯಬೇಕು ಅಪ್ಪುಗೆ
ಪತಿಯ ಮನೆಯಲ್ಲಿ ಪಡೆಯಬೇಕು ಮೆಚ್ಚುಗೆ
ಮಕ್ಕಳ ಮನೆಯಲ್ಲಿ ಇರಬೇಕು ಬೆಚ್ಚಗೆ
ಸಾವು ಬಂದಾಗ ಸಾಗಬೇಕು ಮಣ್ಣಿಗೆ..

‌‌‌‌ 🔆🔆🔆

ಶ್ರೀಮತಿ ಸುಧಾ ಕಂದಕೂರ.ಹುಬ್ಬಳ್ಳಿ