ಬೈಯ್ಯುವುದೆಂದರೆ ಹಾಗೆ ಎಲ್ಲ ತೊಳೆದು ಹಾಕುವುದು
ಹೊಗಳುವುದೆಂದರೆ ಹೀಗೆ ಎಲ್ಲ ಮುಳುಗಿಸಿಬಿಡುವುದು
ಅರ್ಧ ಸತ್ಯ ಹೇಳಿ ಇನ್ನರ್ಧ ಮುಚ್ಚಿಟ್ಟರೆ ಬೆಲೆ ಯಾರಿಗೆ
ಮಾತು ಬಿಚ್ಚುವುದೆಂದರೆ ಕೊನೆಗೆ ಎಲ್ಲ ತೆರೆದಿಡುವುದು
ಸುಳ್ಳು ಮತ್ತು ನಿಜ ಆಜನ್ಮ ವೈರಿಗಳು ಶಾಂತಿಯಿಂದರವು
ಒಂದಕ್ಕೆ ಗಂಟು ಬೀಳುವುದೆಂದರೆ ಎದೆಗೆ ಎಲ್ಲ ಚುಚ್ಚಿಕೊಳ್ಳುವುದು
ಕನ್ನಡಿ ಮುಂದೆ ನಿಂತರೆ ನಮ್ಮ ಮುಖವೆ ಕಾಣಬೇಕು ಅಲ್ಲಿ
ಕಾಡು ಪ್ರಾಣಿ ಇಣುಕುವವೆಂದರೆ ಮೆಲ್ಲಗೆ ಎಲ್ಲ ಕತ್ತಲಾವರಿಸುವುದು
ಆಧುನಿಕ ಯುಗಕಿಂತಲೂ ಶಿಲಾಯುಗವೇ ಮರುಕಳಿಸಬೇಕಿತ್ತೇನೊ
“ಜಾಲಿ” ಜನಜಾಗೃತಿ ಮೀರುತಿದೆಯೆಂದರೆ ಒಟ್ಟಿಗೆ ಎಲ್ಲ ಸಾವರಸುವುದು
🔆🔆🔆
✍️ ವೇಣು ಜಾಲಿಬೆಂಚಿ,ರಾಯಚೂರು.