ಶಿವರಾತ್ರಿಯಂದು ಶಿವನಾಮ ಜಪಿಸೋಣ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡೋಣ ಹೂಪತ್ರಿ ಬಿಲ್ವದಳ ಅರ್ಚಿಸೋಣ ಭಕ್ತಿಭಾವದ ನೈವೇದ್ಯ ಸಮರ್ಪಿಸೋಣ

ಶಿಷ್ಟರ ರಕ್ಷಣೆಗಾಗಿ ಶಿವ ತ್ರಿಶೂಲಧಾರಿ ದುಷ್ಟರನು ಸುಡುವುದು ತ್ರಿನೇತ್ರದ ಉರಿ ಲೋಕ ಸಂಚಾರಕ್ಕೆ ನಂದಿಯೇ ವಾಹನ ಜೀವನ್ಮುಕ್ತಿಯ ಸ್ಮಶಾನ ಶಂಭುವಿನ ತಾಣ

ಸಹಿಸಲಾರನು ರುದ್ರ ಲೋಕಕಂಟಕ ಕೃತ್ಯ ಅಸುರ ಸಂಹಾರಕ್ಕಾಗಿಯೇ ತಾಂಡವ ನೃತ್ಯ ಧರ್ಮಧಿಕ್ಕರಿಸಿದರೆ ಎಚ್ಚರಿಸೀತು ಢಮರುಗ ಶಂಕರನನ್ನು ಮರೆತರೆ ಉಳಿದೀತೆ ಈ ಜಗ

ಲೋಕದ ಪಾಪ ತೊಳೆವ ಗಂಗಾಧರನೇ ರಮಾರಮಣ ಅರ್ಧನಾರೀಶ್ವರನೇ ಅಂಧಕಾರ ಕಳೆಯುವ ಚಂದ್ರಚೂಡನೇ ಭಜಿಸುವಭಕ್ತರನು ಹರಸು ನಾಗಾಭರಣನೇ

ಶಿವಗಣದ ಅಧಿಪತಿ ಕೈಲಾಸ ವಾಸಿಯೇ ಸಾಧು ಸಂತ ಸಾಧಕರ ಆರಾಧ್ಯ ದೈವವೇ ಸಕಲ ಲೋಕದಲ್ಲೂ ಪೂಜಿಪ ದೇವರೇ ಸಕಲ ಕಂಟಕ ಕಳೆದು ರಕ್ಷಿಸು ನೀಲಕಂಠನೇ

            🔆🔆🔆

✍️ ಶ್ರೀ ರವಿಶಂಕರ ಗಡಿಯಪ್ಪನವರ ಹುಬ್ಬಳ್ಳಿ