ಶಿವಪೂಜೆಯ ಶಿವರಾತ್ರಿ ಉಪವಾಸ ಜಾಗರಣೆಯ ಶುಭರಾತ್ರಿ ಶಿಶಿರ ಋತುವಿನ ಪವಿತ್ರ ರಾತ್ರಿ ಶಂಭೋ ಶಂಕರನ ನೆನೆವ ಭಕ್ತಿಯ ರಾತ್ರಿ
ಲಿಂಗಕೆ ಬಿಲ್ವಪತ್ರಿಯ ಏರಿಸುತ ಓಂ ನಮಃ ಶಿವಾಯ ಎನುತ ಶಿವನಾಮದಿ ಜಾಗರಣೆ ಮಾಡುತ ಶಿವನೊಲುಮೆಯ ಕೃಪೆಯ ಪಡೆಯುತ
ಹಗಲು ರಾತ್ರಿ ವರ್ಷಕೊಮ್ಮೆ ಉಪವಾಸ ಕೈಲಾಸವಾಸಿ ಶಿವ ಧ್ಯಾನವ ಮಾಡುತ ಶಿವಪುರಾಣದ ಕಥೆಯ ಕೇಳುತ ನೀಲಕಂಠನ ಸ್ತುತಿಸುವ ಶಿವರಾತ್ರಿ
ಶಿವನೇ ತನಗೆ ಶಿವರಾತ್ರಿ ಪ್ರಿಯ ಎನಲು ಶಿವರಾತ್ರಿಯ ಶಿವಪೂಜೆ ಶಿವನೊಲುಮೆಗೆ ಬೇಡರ ಕಣ್ಣಪ್ಪನಿಗೆ ಒಲಿದಿಹ ಶಿವರಾತ್ರಿ ಚಳಿಗಾಲ ಮುಗಿಯುತ ಬೇಸಗೆಯ ಆಗಮನದಿ
ನದಿಗಳಲಿ ಬೆಳಗಿನ ಸ್ನಾನವ ಮಾಡುತ ಭಕ್ತಿ ಶೃದ್ಧೆಯ ಅಭಿಷೇಕ ಪ್ರಿಯ ಶಿವಲಿಂಗಕೆ ಅಭಿಷೇಕವ ಮಾಡುತಲಿ ಹರ ಹರ ಮಹಾದೇವ ಎನ್ನುವ ಶಿವರಾತ್ರಿ
🔆🔆🔆
✍️ ವೈ.ಬಿ.ಕಡಕೋಳ. ಶಿಕ್ಷಕ ಸಂಪನ್ಮೂಲವ್ಯಕ್ತಿಗಳು,ಮುನವಳ್ಳಿ