ಮನ ಅವಳದು
ಮೌನಕೆ ಕಾರಣರು ಹಲವರು,
ದೇಹ ಅವಳದು
ದುಡಿಮೆಗಾಗಿ ಮಾತ್ರ ಬೇಕವಳು,
ರೂಪ ಅವಳದು
ರೂಪಾಯಿ ತೂರುವರವರು
ಪ್ರತಿಭೆಯವಳದು
ವೇದಿಕೆ ನೀಡುವರು ಅವರು
ಹೆಸರಿನ ಗುರುತಿಗೆ ಕಾರಣನೇ ತಂದೆ
ಕೇವಲ ಮಗುವ ಹೆತ್ತಳವಳು
ಮುದ್ದಿನ ಮಗಳವಳು
ಮತ್ತೊಂದು ಮನೆಯ ಸೊಸೆಯವಳು
ಮನೆಯ ನಗು ಅವಳು
ಮತ್ತೊಂದು ಮನೆಯ ದೀಪಬೆಳಗಬೇಕವಳು
ಸಬಲೆಯವಳು,
ಸದಾ ಮೂಕ ವೇದನೆಯವಳದು
ಸ್ವತಂತ್ರವಿಹುದು,
ನಾಲ್ಕು ಗೊಡೆಯ ನಡುವಿನ ಪಂಜರವವರದು
ಮೃದು ಮಧುರ ಮಾತವಳು, ಸಮಯದ ಗೊಂಬೆಯಾಗಿಹಳು
ಜನ್ಮತಹ ಸಮಾನವಾದ ಹಕ್ಕು
ಪಡೆದಿಹಳು ಅದಕಾಗಿ ಹೊರಾಡುತಿಹಳು
ಲಕ್ಷ್ಮಿ,ಸರಸ್ವತಿ,ಅನ್ನಪೂಣೆ೯,ಶಕ್ತಿ
ಆದರೂ ಬರಿಗೈ ಮಾಲಿಕಳವಳು
ತನಗೇನೂ ದಕ್ಕದೆ,
ಮುಪ್ಪಿನಲಿ ಪರಾಧೀನಳವಳು
ರೆಕ್ಕೆಯ ಶಕ್ತಿಯ ತಿಳಿದು,
ಬಳಸಿದ ಪಕ್ಷಿಯೆ ಬಾನಗಲದ
ಸುಖವ ಪಡೆದಂತೆ
ತನಗಾಗಿ ಸಿಡಿದೆದ್ದರೆ ಮಾತ್ರ
ಬದುಕ ಬಲ್ಲಳವಳು
ಬದುಕನು ಸವೆಸಬಲ್ಲಳು,
ಸುಖಿಸಬಲ್ಲಳು…..
🔆🔆🔆
✍️ಶ್ರೀಮತಿ. ಸವಿತಾ ಲಿಂಗಾರೆಡ್ಡಿ, ಹುಬ್ಬಳ್ಳಿ
ಸತ್ಯದ ಮಾತು. ಶಕ್ತಿ, ಅನ್ನಪೂರ್ಣೆ ಮೊದಲಾಗಿ ಬಣ್ಣಿಸಿದರೂ ಯತಾರ್ಥದಲ್ಲಿ ಅವಳದ್ದು ಬರಿಗೈ ಮಾಲಿಕತ್ವವೇ ಸರಿ
LikeLike