ಹೆಣ್ಣೂ ಅಂತಾರ ಮಣ್ಣೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಸೀತೇನೂ ಅಂತಾರ ಮಾತೇನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಜನನೀನೂ ಅಂತಾರ ಜಗನ್ಮಾತಾನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ದೇವತೆನೂ ಅಂತಾರ ಲಕ್ಷ್ಮೀನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಅಬಲೇನೂ ಅಂತಾರ ಸಬಲೇನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಸ್ತ್ರೀನೂ ಅಂತಾರ ಆದಿಶಕ್ತಿನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಕ್ಷಮಯಾಧರಿತ್ರಿನೂ ಅಂತಾರ ಕಾಳಿಕಾಂಬೆನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಸ್ಫೂರ್ತಿನೂ ಅಂತಾರ ಸ್ವೇಚ್ಛೆನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
ಮಹಿಳಾ ದಿನಾಚರಣೆನೂ ಅಂತಾರ ನೆನಿಬೇಕಂತನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ
“ಜಾಲಿ” ಹೆಣ್ಣಂದ್ರೆ ಏಳು ಜನುಮದ ಪಡಿಪಾಟಲಂತನೂ ಅಂತಾರ ಹೆಣ್ಣ್ಯಾಕ ಹುಟ್ಟಿತೋ ಅಂತಾನೂ ಅಂತಾರ ಮಣ್ತಿಂಬ ಕೆಲಸಾ ಮಾತ್ರ ಬಿಡೂದಿಲ್ಲ.
🔆🔆🔆
✍️–ವೇಣು ಜಾಲಿಬೆಂಚಿ,ರಾಯಚೂರು.
( ಎಲ್ಲರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಅದರಲ್ಲೂ ವಿಶೇಷವಾಗಿ ಅಪ್ರತಿಮ ತ್ಯಾಗದ ರೂವಾರಿಗಳಾದ ಸ್ತ್ರೀ ಕುಲಕ್ಕೆ ಈ ವಿಶೇಷ ಗಜಲ್ ಸಮರ್ಪಿತ)