ಗೆಳತಿ ನಾ ನಗುತ
ನಿನ್ನ ನಗಿಸುವುದಲ್ಲ ಪ್ರೀತಿ
ನಿನ್ನ ನಗಿಸುತ್ತಾ
ನಾ ನಗುವುದು ಪ್ರೀತಿ.!
ಗೆಳತಿ ನಿನ್ನ ಕಣ್ಣೀರೊರೆಸಿ
ಸಂತೈಸುವುದಲ್ಲ ಒಲವು
ನೀ ಕಣ್ಣೀರು ಹರಿಸದಂತೆ
ಸಂಭಾಳಿಸುವುದು ಒಲವು.!
ನಿನ್ನ ಹಾಡಿಗೆ ತಲೆದೂಗಿ
ಮಲಗುವುದಲ್ಲ ಅನುರಾಗ
ನಾ ಹಾಡುತ್ತಾ ತಟ್ಟಿ ನಿನ್ನ
ಮಲಗಿಸುವುದು ಅನುರಾಗ.!
ನನ್ನ ಹೆಜ್ಜೆಯ ಹಿಂದೆ ನಿನ್ನ
ಕರೆದೊಯ್ಯುವುದಲ್ಲ ಪ್ರೇಮ.!
ನಿನ್ನ ಹೆಜ್ಜೆಗೆ ಹೆಜ್ಜೆಬೆರೆಸಿ
ಜೊತೆ ನಡೆವುದೇ ಪ್ರೇಮ.!
ಗೆಳತಿ ಹಗಲಿರುಳು ನಿನ್ನ
ನೆನೆಯುವುದಲ್ಲ ಪ್ರೀತಿ
ಅನವರತ ಅವಿರತ ನಿನ್ನ
ಮರೆಯದಂತಿರುವುದು ಪ್ರೀತಿ.!
ಬದುಕೆಲ್ಲ ನಿನಗಾಗಿ
ಕಾಯುತ್ತ ಇರುವುದಲ್ಲ ಒಲವು
ನಿನಗಾಗಿ ಕಾಯುತ್ತಲೇ
ಬದುಕಿ ಬಿಡುವುದು ಒಲವು.!
🔆🔆🔆
✍️ಶ್ರೀ ಎ.ಎನ್.ರಮೇಶ್. ಗುಬ್ಬಿ.
(ಮಹಿಳಾ ದಿನಾಚರಣೆಯ ಶುಭಕಾಮನೆಗಳೊಂದಿಗೆ ಅನುರಾಗದ ಸಪ್ತಸ್ವರಗಳ ಒಲವಿನ ಕವಿತೆ)