ಎಷ್ಟು ಪ್ರೀತಿಸಿದರೇನು ಹುರುಳಿಲ್ಲ ಬಿಡು
ಜೊತೆಗೆ ಹೆಜ್ಜೆ ಹಾಕಿದರೇನು ಹುರುಳಿಲ್ಲ ಬಿಡು
ಬಿರುಗಾಳಿ ದ್ವೇಷಕೆ ದೋಣಿ ಮುಗ್ಗರಿಸುತಿದೆ
ಒಲವ ಕಡಲ ನೀಡಿದರೇನು ಹುರುಳಿಲ್ಲ ಬಿಡು
ಬರವಸೆಯ ಬಾಂದಳದಿ ತಂಗದಿರನ ಗೈರು
ಹಾಲ ಹೊಳೆ ಹರಿಸಿದರೇನು ಹುರುಳಿಲ್ಲ ಬಿಡು
ಬರಗಾಲದ ಬಿಸಿಲಿಗೆ ಬೇರುಗಳೇ ಒಣಗಿವೆ
ಭೋರ್ಗರೆವ ಮಳೆ ಸುರಿಸಿದರೇನು ಹುರುಳಿಲ್ಲ ಬಿಡು
ಆರಾಧ್ಯೆಯ ಸುಖ ನಿದ್ರೆಯೆ ಮಾಯವಾಗಿದೆ
ರಂಗಾದ ಕನಸುಗಳ ಕರೆದರೇನು ಹುರುಳಿಲ್ಲ ಬಿಡು
🔆🔆🔆
✍️ಶ್ರೀಮತಿ.ಗಿರಿಜಾ ಮಾಲಿಪಾಟೀಲ ವಿಜಯಪೂರ