ದಿಕ್ಕು ಬದಲಿಸುವ ಮೊದಲು
ನಡೆವ ದಾರಿ ಬದಲಿಸಿ.
ಕನಸು ಕೈಬಿಡುವ ಮೊದಲು
ಕುಸಿವ ಮನಸು ಗಟ್ಟಿಗೊಳಿಸಿ.!

ಕನ್ನಡಿ ಬದಲಿಸುವ ಮೊದಲು
ಧರಿಸಿದ ಕನ್ನಡಕ ಪರಿಶೀಲಿಸಿ
ಚಿಂತನೆ ಬದಲಿಸುವ ಮೊದಲು
ವ್ಯರ್ಥ ಚಿಂತೆಗಳ ನಿಲ್ಲಿಸಿ.!

ಮಿತ್ರರ ಬದಲಿಸುವ ಮೊದಲು
ಸತ್ಯ-ಮಿಥ್ಯಗಳ ಪರೀಕ್ಷಿಸಿ.!
ಬಂಧಗಳ ಬೆಸೆವ ಮೊದಲು
ಆತಂಕ ಅನುಮಾನ ಅಳಿಸಿ.!

ಪಲ್ಲಂಗ ಬದಲಿಸುವ ಮೊದಲು
ಹೊರುವ ಕೈಗಳ ಬಲಪಡಿಸಿ.!
ವ್ಯಕ್ತಿಗಳ ಬದಲಿಸುವ ಮೊದಲು
ವ್ಯವಸ್ಥೆ ದೋಷಗಳ ಸರಿಪಡಿಸಿ.!

ಅನಿಸಿಕೆ ಬದಲಿಸುವ ಮೊದಲು
ಅರಿವಿನಾ ದೀಪ ಬೆಳಗಿಸಿ.!
ತತ್ವ ಬೋಧಿಸುವ ವೂದಲು
ಅಂತಃಸತ್ವ ಸತ್ಯ ಸದೃಢಗೊಳಿಸಿ.!

ಶಾಂತಿ ಬಯಸುವ ಮೊದಲು
ಭೀತಿ ಭ್ರಮೆಗಳ ಭಸ್ಮವಾಗಿಸಿ
ಬೆಳಕಿನಡೆಗೆ ನಡೆವ ಮೊದಲು
ಒಳಗಣ ಅಂಧಕಾರ ತೊಲಗಿಸಿ.!

‌‌ 🔆🔆🔆

✍️ ಎ.ಎನ್.ರಮೇಶ್. ಗುಬ್ಬಿ.