ಸುತ್ತ ಮುತ್ತ ಬೆಂಕಿ ಆವರಿಸುತ್ತಿದೆ ಆದರೂ ಬದುಕಿದ್ದೇವೆ ಇದೇ ನೋಡಿ ಪವಾಡ
ಅಲ್ಲಿ ಇಲ್ಲಿ ಎನ್ನದೆ ಗಬ್ಬು ನಾರುತ್ತಿದೆ ಆದರೂ ಜೀವಂತ ಇದ್ದೇವೆ ಇದೇ ನೋಡಿ ಪವಾಡ
ಪ್ರಾಣಿ ಪಕ್ಷಿಗಳು ಬೆರೆತು ಜೀವಿಸುತಿವೆ ಮನುಷ್ಯರು ನಾವು ಅನ್ಯರಾಗುತಿದ್ದೇವೆ
ನಮ್ಮ ಅರ್ಥ ಏನೆಂದು ಪ್ರಕೃತಿ ಕೇಳುತ್ತಿದೆ ಆದರೂ ಕಿವುಡರಾಗಿ ನಡೆದಿದ್ದೇವೆ ಇದೇ ನೋಡಿ ಪವಾಡ
ಈಗ ಪ್ರಶಸ್ತಿ ಕೊಡುವುದೊಂದೇ ಬಾಕಿಯಿದೆ ಅರ್ಥಪೂರ್ಣವಾಗಿ ಬದುಕಿದವರಿಗೆ
ಬಟ್ಟೆ ಹಾಕಿದ್ದೇವೆಂದರು ಮಾನ ಹೋಗುತ್ತಿದೆ ಆದರೂ ಬೆತ್ತಲಾಗಿ ಹೊರಟಿದ್ದೇವೆ ಇದೇ ನೋಡಿ ಪವಾಡ
ನಮಗೆ ನಾವೇ ಕೊಟ್ಟು ಕೊಂಡ ಉಪಮಾನಗಳು ಕೊರಳಸರ್ಪಗಳು ಕಚ್ಚದೇ ಇರಲಾರವು
ಬಿರುದಿಗೆ ಮಾರುಹೋದ ಮನುಜನ ಬಾಳು ಮೂಲೆಗುಂಪಾಗುತ್ತಿದೆ ಆದರೂ ಕತ್ತಲನು ಮೆಚ್ಚಿಕೊಂಡಿದ್ದೇವೆ ಇದೇ ನೋಡಿ ಪವಾಡ
ಏನೇ ಬಂದರೂ ಹೋದರೂ ಧೈರ್ಯ ತುಂಬುತಿದ್ದವನನು ಈಗ ಹುಡುಕುವುದು ಅಸಾಧ್ಯದ ಮಾತು ಆ ದಿನಕರನಿಗೂ ಅದರ ಆಚೂಕಿ ತಿಳಿದಿಲ್ಲ
“ಜಾಲಿ” ಠೊಳ್ಳು ಭರವಸೆಗಳ ಕೊಟ್ಟು ಹಗಲು ದರೋಡೆ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದೆ ಬಾಕಿದಿನಗಳ ಕಳೆಯುತಿದ್ದೇವೆ ಇದೇ ನೋಡಿ ಪವಾಡ
🔆🔆🔆
✍️ ವೇಣು ಜಾಲಿಬೆಂಚಿ,ರಾಯಚೂರು