ನಿನಗೆ ಆ ದೈವವು ಸುಡುವ ಶಕ್ತಿ ಕೊಟ್ಟಿರಬಹುದು ನೀ ಸುಡುತ್ತಿರು
ಆ ದೈವ ನನಗೆ ಸುಟ್ಟುಕೊಳ್ಳುವ ಶಕ್ತಿ ನೀಡಿಹುದು ನೀ ಸುಡುತ್ತಿರು

ಆವೇಶದ ಕಿಚ್ಚಿಗೆ ಹೊತ್ತಿ ಉರಿದಿದ್ದವು ಅರಮನೆ ಗುಡಿಸಲೂ
ತರವಲ್ಲವೆಂದರೂ ಇತಿಹಾಸ ಮರುಕಳಿಸುತಿಹುದು
ನೀ ಸುಡುತ್ತಿರು

ತಾಯಿಯ ಜೋಗುಳ ಅದೆಷ್ಟು ಬೇಗ ಮರೆಯಲು ಹಾತೊರೆವರು
ಒಡಲು ತುಂಬಿದ ಹಾಲು ಈಗ ವಿಷವಾಗುತಿಹುದು ನೀ ಸುಡುತ್ತಿರು

ಭಟ್ಟಂಗಿತನ ಕನ್ನಡಿಗಷ್ಟೆ ಅಲಂಕಾರ ಮುಖಕ್ಕಲ್ಲ ಮೋಹಬೇಡ
ಜೀವಭಾವ ತುಂಬಿ ಬದುಕುವುದು ಕಷ್ಟವಾಗುತಿಹುದು ನೀ ಸುಡುತ್ತಿರು

ಹುಟ್ಟಿಸಿದವನೊಬ್ಬ ಮೆಚ್ಚಿಕೊಂಡವನೊಬ್ಬ ಎಲ್ಲರ ಮರೆತರು ಅಸಂಖ್ಯ
ಮಕ್ಕಳು “ಜಾಲಿ” ಈ‌ ಜೀವನ ಮರಣವನಪ್ಪುತಿಹುದು ನೀ ಸುಡುತ್ತಿರು

              🔆🔆🔆

✍️ ವೇಣು ಜಾಲಿಬೆಂಚಿ,ರಾಯಚೂರು.