ಬುದ್ದನಾಗುವುದೆಂದರೆ..
ಆಸೆಗಳನ್ನು ತ್ಯಜಿಸುವುದಲ್ಲ
ಆಸೆಗಳನ್ನು ಜಯಿಸುವುದು.!

ಬಸವನಾಗುವುದೆಂದರೆ..
ತತ್ವಗಳನ್ನು ಶೋಧಿಸುವುದಲ್ಲ
ತತ್ವಗಳನ್ನು ಸಾಧಿಸುವುದು.!

ಗೊಮ್ಮಟನಾಗುವುದೆಂದರೆ..
ವಸ್ತುವಸ್ತ್ರ ವಿಮುಖನಾಗುವುದಲ್ಲ
ರಾಗದ್ವೇಷ ವಿರಕ್ತನಾಗುವುದು.!

ವಿವೇಕನಾಗುವುದೆಂದರೆ..
ಧರ್ಮವನ್ನು ಆಡಂಬರಿಸುವುದಲ್ಲ
ಧರ್ಮವನ್ನು ಆರಾಧಿಸುವುದು.!

ಗಾಂಧಿಯಾಗುವುದೆಂದರೆ
ಸರಳತೆಯನ್ನು ಬೋಧಿಸುವುದಲ್ಲ
ಸರಳತೆಯನ್ನು ಜೀವಿಸುವುದು.!

ಸಂತರಾಗುವುದೆಂದರೆ
ಭೋಗಗಳಿಗೆ ಬೆನ್ನುತಿರುಗಿಸುವುದಲ್ಲ
ಭೋಗಗಳೆದುರು ಬಾಗದಿರುವುದು.!

ನಿದರ್ಶನವಾಗುವುದೆಂದರೆ..
ಆದರ್ಶಗಳನ್ನು ಬದುಕುವುದಲ್ಲ
ಬದುಕನ್ನೇ ಆದರ್ಶವಾಗಿಸುವುದು.!

          🔆🔆🔆

✍️ ಶ್ರೀ ಎ.ಎನ್.ರಮೇಶ್. ಗುಬ್ಬಿ.