ಕಂಬಳಿ ಹೊದ್ದು ಕನಸಲ್ಲಿ ಮುಲುಗುವರು ಇದು ಎಂಥಾ ಲೋಕವಯ್ಯಾ
ಕೆಸರಲ್ಲಿ ಬಿದ್ದು ಮನದಲ್ಲಿ ಗೋಳಿಡುವರು ಇದು ಎಂಥಾ ಲೋಕವಯ್ಯಾ

ನಿಜದ ತಲೆಯ ಮೇಲೆ ಯಾರಿಗೂ ಇಲ್ಲ ಇಲ್ಲಿ ಆಸ್ಥಾನದ ಆಶ್ರಮ
ಸಿಟ್ಟಿಗೆ ಕುದ್ದು ಬಯಲಲ್ಲಿ ಕೈಬೀಸುವರು ಇದು ಎಂಥಾ ಲೋಕವಯ್ಯಾ

ನೂರಿಗೆ ಸಾವಿರ ಸಾವಿರಕೆ‌‌ ಮಿಂಚಿ‌ ಇದ್ದವನು ಸರದಾರ ಏನೀವ್ಯಾಪಾರ
ದುಡ್ಡಿಗೆ ಜಿದ್ದು ಸಾಧಿಸಲು ಪಣತೊಡುವರು ಇದು ಎಂಥಾ ಲೋಕವಯ್ಯಾ

ನಳಿಕೆಯ ಗೋಲಿ ಕೂಡುಜಾಗದಲಿ ಗತ್ತಿನಲಿ ಕೂಡಬಲ್ಲ ತಾಕತ್ತುಳ್ಳವನೇ
ಇಂದು ದ್ರೋಹಿಯೆನುತಿದ್ದು ವಿಷಕಾರುತಿಹರು ಇದು ಎಂಥಾ ಲೋಕವಯ್ಯಾ

ಭಾವದರಮನೆ ಸಾಹುಕಾರನಿಗೆ ಅದೆಂತಹ ಬಡತನ “ಜಾಲಿ”
ಬಾಳಕೋಟೆ ಮೆಚ್ಚಿದ್ದು ನಾಟಕಮಾಡುವರು ಇದು ಎಂಥಾ ಲೋಕವಯ್ಯಾ

        🔆🔆🔆

✍️ ವೇಣು ಜಾಲಿಬೆಂಚಿ, ರಾಯಚೂರು.