ವಿಷ ಎಷ್ಟು ಅಗ್ಗವಾಗಿದೆ ಈಗ ಯಾರನ್ನು ಕೇಳಿದರೂ ಸಿಗುವಷ್ಟು ಬೇಗ
ಮಾತು ಎಷ್ಟು ಕಲುಷಿತವಾಗಿದೆ ಈಗ ಯಾರನ್ನು ಮಾತನಾಡಿದರೂ ಹಬ್ಬುವಷ್ಟು ರೋಗ
ಸುಖ ದುಃಖ ಒಂದೇ ಮನೆಯ ಬಾಗಿಲುಗಳಾಗಿ ಉಳಿದಿಲ್ಲ ಗಾಳಿಯದೇ ಜೋರು
ಮನ ಅದೆಷ್ಟು ಕುಪಿತವಾಗಿದೆ ಈಗ ಯಾರನ್ನು ಬೇಕಾದರೂ ತಡವಿಕೊಳುವಷ್ಟು ಮಂಗ
ಸೋತರೆ ಗೆದ್ದರೆ ಫರಕಿಲ್ಲದಂತೆ ಬದುಕುತಿದ್ದರು ಒಂದಾನೊಂದು ಕಾಲದಲ್ಲಿ ಈಗಿಲ್ಲ
ಆವೇಗ ಬಹಳಷ್ಟು ಸಾಮಾನ್ಯವಾಗಿದೆ ಈಗ ಯಾರನ್ನು ವಿಚಾರಿಸಿದರೂ ಸುಡುವಷ್ಟು ವಿರಾಗ
ಆಸೆಯ ಕೋಳಿ ಇಡುವ ಬಯಕೆಯ ಮೊಟ್ಟೆ ಎಷ್ಟು ತಿಂದರೂ ಒಡೆದರೂ ಹಸಿವಿಂಗದು
ಆಸೆಯ ಅರಬ್ಬರವೆಷ್ಟು ವೇಗವಾಗಿದೆ ಈಗ ಯಾರನ್ನು ಲೆಕ್ಕಿಸಬೇಕೆಂದರೂ ತುಳಿಯುವಷ್ಟು ಸಲಗ
ಓ ಅಜನಬಿ ಮುಸಾಫಿರ್ ಇಷ್ಟಾದರೂ ಕರುಣೆತೋರು ಇಲ್ಲಿ ಮಾಲೀಕನಿಗಿಂತ
ಸೇವಕನಿಗದೆಷ್ಟು ಉಗ್ರ ಶಿಕ್ಷೆ ಕಾದಿದೆ “ಜಾಲಿ” ಈಗ ಯಾರನ್ನು ನಿಲ್ಲಿಸಿ ಬೇಡಿಕೊಂಡರೂ ಕೇಳದಷ್ಟು ಕಿವಿತುಂಬ ಬೀಗ
🔆🔆🔆
✍️ ವೇಣು ಜಾಲಿಬೆಂಚಿ,ರಾಯಚೂರು.