ಬರೆಯುವ ಕೈಗೆ ಈಗ ಬೇಸರವೋ ಬೇಸರ
ಸತ್ಯದ ಬೀದಿಗೆ ಈಗ ಬೇಸರವೋ ಬೇಸರ

ಹಾಡುವ ದನಿಗೆ ಈಗ ಬೇಸರವೋ ಬೇಸರ
ಮೋಡದ ಹನಿಗೆ ಈಗ ಬೇಸರವೋ ಬೇಸರ

ಪರಿಶುದ್ಧ ಚಿಂತನೆಗೆ ಈಗ ಬೇಸರವೋ ಬೇಸರ
ಆತ್ಮದೊರೆಗಲ್ಲಿಗೆ ಈಗ ಬೇಸರವೋ ಬೇಸರ

ತಾಯಿ ಮಮತೆಗೆ ಈಗ ಬೇಸರವೋ ಬೇಸರ
ಬಿಂಬದ ಕಣ್ಣಿಗೆ ಈಗ ಬೇಸರವೋ ಬೇಸರ

ಪರಂಪರೆಯ ಸಾಲಿಗೆ ಈಗ ಬೇಸರವೋ ಬೇಸರ
“ಜಾಲಿ” ಕಣ್ತುಂಬ ನಿದ್ದೆಗೆ ಈಗ ಬೇಸರವೋ ಬೇಸರ

         🔆🔆🔆

✍️ವೇಣು ಜಾಲಿಬೆಂಚಿ,ರಾಯಚೂರು.