ಸೋಜಿಗವಲ್ಲ ಬರೆಯುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ಸಂಕಷ್ಟವಲ್ಲ ಸತ್ಯದ ಹಾದಿಯಲಿ ಸಾಗುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ಮರಣವಲ್ಲ ಬದುಕುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ನಾಟಕವಲ್ಲ ಜೀವಿಸುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ಸಂಗೀತವಲ್ಲ ಹಾಡುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ನಶೆಯಲ್ಲ ಕುಡಿಯುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ತಪವಲ್ಲ ಸತ್ಯನುಡಿಯುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ತ್ಯಾಗವಲ್ಲ ಕೊಡುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
ವಿರಕ್ತಿಯಲ್ಲ ಅನುಭವಿಸುವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
“ಜಾಲಿ” ಭಕ್ತಿಯಲ್ಲ ಕೈಮುಗಿವುದೆಂದರೆ ಬೆಂಕಿಯ ಜೊತೆ ಬೆರೆಯುವುದಲ್ಲವೆ
🔆🔆🔆
✍️-ವೇಣು ಜಾಲಿಬೆಂಚಿ,ರಾಯಚೂರು.