1. ರೇಟು..!

ಅಡನಾಡಿ ಸಾಹಿತಿಗಳು
ಹೆಮ್ಮೆಯಲಿ ಗುಡುಗಿದರು
“ಕೊಡಿರಿ ಮರ್ಯಾದೆ
ನನ್ನ ಹೆಸರಿನ ಹಿಂದಿದೆ
ಗೌರವ ಡಾಕ್ಟರೇಟು.!”

ಕಿಲಾಡಿ ಓದುಗರೊಬ್ಬರು
ಮೆಲ್ಲ ಕೇಳಿಯೇ ಬಿಟ್ಟರು
“ಸ್ವಾಮಿ ಅದ ಪಡೆಯಲು
ಎಷ್ಟು ಕೊಟ್ಟಿರಿ ರೇಟು?”

🔅🔅🔅

2. ಮಾನ-ದಂಡ.!

ಪ್ರಶಸ್ತಿ ಆಯೋಜಕರು
ಮೆಲ್ಲಗೆ ಹೇಳಿದರು..
“ರಾಜ್ಯರತ್ನ ಐದುಸಾವಿರ
ರಾಷ್ಟ್ರರತ್ನ ಹತ್ತುಸಾವಿರ
ನಗದು ಮಾತ್ರ ಸ್ವೀಕಾರ”

ಹೌರಾರುತ ಬಡಸಾಹಿತಿ
ನಿಟ್ಟುಸುರಿಟ್ಟು ಕೇಳಿದರು..
“ಸ್ವಾಮೀ ಬೇರೇನಿದೆ
ಹೇಳಿ ಮಾನದಂಡ.?”

ಪಕ್ಕದ್ದಲ್ಲಿದ್ದ ಕೋದಂಡ
ಮುಗುಳ್ನಕ್ಕು ನುಡಿದ..
“ಧನದ ಜೊತೆಜೊತೆಗೆ
ಮಾನವಿಲ್ಲದಿರುವುದೇ
ಮುಖ್ಯ ಮಾನದಂಡ.!”

🔆🔆🔆

✍️ ಶ್ರೀ ಎ.ಎನ್.ರಮೇಶ್. ಗುಬ್ಬಿ.