ಸತ್ಯ ಮೇವ ಜಯತೆಯ ಹಾಡನು ಕೇಳು|
ಬರಡಾದ ಭೂಮಿಯಲ್ಲಿ ರೈತನ ಗೋಳು|
ಖಾದಿ ತೊಟ್ಟವರಿಲ್ಲಿ ಮತಕ್ಕಾಗಿ ಬಂದರು|
ಕಾಯಕ ಮರೆತು ಸ್ವಾರ್ಥದಲಿ ಮಿಂದರು|

ಸತ್ಯ ಮೇವ ಜಯತೆಯ ಹಾಡನು ಕೇಳು|
ಬಡತನದಲ್ಲಿ ಮುಳುಗಿದೆ ರೈತನ ಬಾಳು|
ಖಾದಿ ತೊಟ್ಟವರಡಿಯಲಿದೆ ಹಸಿರ ಪೈರು|
ಕುಡಿಸಿದರು ಸುಳ್ಳು ಆಶ್ವಾಸನೆಗಳ ನೀರು|

ಸತ್ಯ ಮೇವ ಜಯತೆಯ ಹಾಡನು ಕೇಳು|
ನ್ಯಾಯಬೆಲೆ ಫಲಿಸದೇ ರೈತನಾದ ಹಾಳು|
ಕಣ್ಣೀರಲಿ ನಿರ್ಮಿಸಿಹನು ಆಶ್ರಯ ಸೂರು|
ಛಲದಿ ಎಳೆಯುತಿರುವ ಬವಣೆಯ ತೇರು|

        🔆🔆🔆                   

✍️ ಶ್ರೀಮತಿ ಸುಧಾ ಕಂದಕೂರ, ಹುಬ್ಬಳ್ಳಿ