ಬಾಷೆ ಎನ್ನುವುದು ಹೇಗೆ ನಿಂತ ನೀರಲ್ಲವೋ ಹಾಗೆ ಸಾಹಿತ್ಯವೂ ನಿಂತ ನೀರಲ್ಲ ಸದಾ ಹರಿಯುವ ನದಿ. ಪ್ರತಿಯೊಂದು ಭಾಷೆಯ ಉಗಮದೊಂದಿಗೆ ಅದರದೇ ಆದ ಸಾಹಿತ್ಯದ ಉಗಮವಾಗು ತ್ತದೆ. ಭಾಷೆ ಸಂಕೀರ್ಣತೆಯಿಂದ ಸರಳತೆಯ ಕಡೆಗೆ ಸಾಗುವಂತೆ ಸಾಹಿತ್ಯವು ಸಂಕಿರ್ಣತೆಯಿಂದ ಸರಳತೆ ಕಡೆಗೆ ಸಾಗುತ್ತದೆ. ಭಾಷೆಯ ಜೊತೆ ಜೊತೆಗೆ ಸಾಹಿತ್ಯವೂ ತನ್ನನ್ನು ತಾನು ವಿಸ್ತರಿಸಿ ಕೊಳ್ಳುತ್ತಾ ಹೋಗುತ್ತದೆ. ಸೃಜನಶೀಲ ಪ್ರತಿಭೆಗೆ ತನ್ನ ಕೈ ಚಾಚಿ ಬಾಚಿಕೊಳ್ಳುತ್ತದೆ. ಹೊಸ ಹೊಸತಾದ ಸವಾಲುಗಳನ್ನು ಎಸೆಯುತ್ತಾ ಬೆಳೆಯುತ್ತದೆ. ಆರಂಭದಲ್ಲಿ ಪ್ರತಿ ಸಾಹಿತ್ಯವೂ ಸೀಮಿತ ವಲಯವನ್ನು ಹೊಂದಿದ್ದು ಕಾಲ ಸರಿದಂತೆ ವಿವಿಧ ಹೊಸ ಪ್ರಕಾರಗಳನ್ನು ಸೃಷ್ಥಿಸಿಕೊಳ್ಳುತ್ತಾ ಬೇರೆ ಬೇರೆ ಸಾಹಿತ್ಯದ ಪ್ರಕಾರಗಳನ್ನು ಸ್ವೀಕರಿಸಿ ವೈವಿಧ್ಯತೆಯನ್ನು ಪಡೆಯುತ್ತಲೇ ಸಾಗುತ್ತದೆ. ಕನ್ನಡ ಭಾಷೆಯು ಇದಕ್ಕೆ ಹೊರತಾಗಿಲ್ಲ. ಮೊದಮೊದಲು ಸಂಸ್ಕೃತದ ಮಡಿವಂತಿಕೆಯ ಪ್ರಕಾರಗಳಲ್ಲಿದ್ದ ಇದು ಹದಿನೆಂಟನೇ ಶತಮಾನದಿಂದ ಇತ್ತೀಚೆಗೆ ಇತರೆಲ್ಲ ಭಾಷೆಯ ಸಾಹಿತ್ಯ ಪ್ರಕಾರವನ್ನು ಅಳವಡಿಸಿಕೊಂಡು ವೇಗ ಮತ್ತು ವಿಸ್ತಾರ ದಲ್ಲಿ ಗಣನೀಯವಾಗಿ ಎತ್ತರಕ್ಕೆ ಬೆಳೆದು ನಿಂತಿತು ಅದೆಷ್ಟೋ ಅಧುನಿಕ ಸಾಹಿತಿಗಳು ಹೊಸ ಸಾಹಿತ್ಯ ಪ್ರಕಾರಗಳನ್ನು ಪರಿಚಯಿ ಸುವುದರ ಮೂಲಕ ಕನ್ನಡ ಸಾಹಿತ್ಯದ ಕೊರತೆಗಳನ್ನು ನೀಗಿ ಹೊಸ ಹೊಸ ಪ್ರಕಾರ ಗಳನ್ನು ವಿಸ್ತರಿಸುವಲ್ಲಿಯೂ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೊಸ ಸಾಹಿತ್ಯದ ಪ್ರಕಾರ ವನ್ನು ಅಳವಡಿಸುವುದು ಅಥವಾ ಸೃಷ್ಟಿಸುವುದು ಸೃಜನಶೀಲರಿಗೆ ಮಾತ್ರ ಸಾಧ್ಯವಾಗುವ ಕೆಲಸ.

ಕನ್ನಡದಲ್ಲಿ ಇತ್ತಿಚೆಗೆ ಹೆಚ್ಚೆಚ್ಚು ಪ್ರೀಯವಾಗುತ್ತಿರುವ ಜನರ ಮೆಚ್ಚುಗೆ ಗಳಿಸುತ್ತಿರುವ ವೇಗದ ಬದುಕಿನ ಸಮಯದ ಅಭಾವಕ್ಕೆ ಹೊಂದಿಕೆ ಯಾಗುವಂತ ಸಾಹಿತ್ಯ ಪ್ರಕಾರಗಳು ಸೃಷ್ಠಿಯಾಗುತ್ತಿವೆ. ಹಾಯ್ಕು, ಟಂಕಾ, ಮಿನಿಗವನ, ಹನಿಗವನ, ಚುಟುಕು, ನ್ಯಾನೋ ಕಥೆ ಮುಂತಾದ ಸಾಹಿತ್ಯ ಪ್ರಕಾರಗಳು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರುತ್ತಿವೆ. ವೇಗದ ‌ ಮತ್ತು ಒತ್ತಡದ ಬದುಕಿಗೆ ಮನರಂಜನೆ, ಸಮಾಧಾನ ನೀಡಲು ಇವು ಸೂಕ್ತವಾದ. ಸಾಹಿತ್ಯ ಪ್ರಕಾರವಾಗಿವೆ. ಓಡೋಡಿ ದಣಿದು ಬಸವಳಿದವನ ಬಾಯಿಗೆ ಹನಿಸಿ ಹುರಿದುಂಬಿಸಲು ಇವು ಸೂಕ್ತವೂ ಎನಿಸುತ್ತವೆ. ಇನ್ನು ಸಂಗ್ರಹಶೀಲ ಗುಣವುಳ್ಳ ಸಾಹಿತ್ಯ ಪ್ರಕಾರಗಳು ಹುಟ್ಟ ಬೇಕಾಗಿದೆ. ಕನ್ನಡದಲ್ಲಿ ಮೊದಲ ಭಾರಿಗೆ ನ್ಯಾನೋ ಕಥೆಗಳನ್ನು ಬರೆದವರು ಗೋಪಕುಮಾರ್ ಅವರು. ಅಂಚೆ ಕಾರ್ಡಿನ ಕಥೆಗಳು, ಅತೀ ಸಣ್ಣ ಕಥೆಗಳು, ಮಿನಿ ಕಥೆಗಳು ಎಂದು ಕರೆಸಿಕೊಳ್ಳುವ ಈ ನ್ಯಾನೋ ಕಥೆ ಮೂಲತಃ ಇಂಗ್ಲೀಷ ಮೂಲದ್ದಾಗಿದೆ. ಇಂಗ್ಲೀಷಿನಲ್ಲಿ ಇದನ್ನು ಫ್ಲ್ಯಾಶ್ ಫಿಕ್ಷನ್ ಎಂದು ಕರೆಯುತ್ತೇವೆ.
ಇಂಗ್ಲೀಷ್ ಸಾಹಿತ್ಯದಲ್ಲಿ ಫ್ಲ್ಯಾಶ್ ಫಿಕ್ಷನ್ ಎಂದು ಗುರುತಿಸುತ್ತಾರೆ. ವಾಟ್ಸಪ್, ಫೆಸ್ಬುಕ್ ನಲ್ಲಿ ಇಂತ ಕಥೆಗಳು ಹೆಚ್ಚಾಗಿ ಹರಿದಾಡುತ್ತವೆ. ಪ್ರತಿಲಿಪಿ, ಯುವರ್ ಕೋಟ್ ಆಪ್ ಗಳಲ್ಲಿ ಇಂತಹ ಕಥೆಗಳನ್ನು ಕಾಣಬಹುದು. ಅತೀ ಸಣ್ಣ ಕತೆಗೆ ಉದಾಹರಣೆ: ಆಕಾಸ್ಮಿಕವಾಗಿ ಬಸ್ಸಿನ ಬ್ರೇಕ್ ಹಾಕಿದ್ದರಿಂದ ಸೀಟಿನಲ್ಲಿ ಕುಳಿತ ವ್ಯಕ್ತಿ ಕೆಳಕ್ಕೆ ಬಿದ್ದ. ಬಾಕಿ ಪ್ರಯಾಣಿಕ ರೆಲ್ಲರೂ ಗಹಗಹಿಸಿ ನಕ್ಕರು. ಅವನು ಎದ್ದು ತನ್ನ ಸೀಟಿನ ಮೇಲೆ ಕುಳಿತಾಗಲೇ ತಿಳಿದದ್ದು ಆತನ ಬಲಗೈ ಬಲಹೀನವೆಂದು. ಹೀಗೆ ನ್ಯಾನೋಕಥೆ ಎನ್ನುವುದು ಅತೀ ಸಂಕ್ಷಿಪ್ತ ಸಾಹಿತ್ಯ ಪ್ರಕಾರವಾಗಿದೆ. ಈ ಫ್ಯಶ್ ಫಿಕ್ಷನ ಅನ್ನು ಐದು ಪ್ರಕಾರದಲ್ಲಿ ನೋಡಬಹು ದಾಗಿದೆ.

  1. ಇದರಲ್ಲಿ 140 ಅಕ್ಷರಗಳಿದ್ದು ಇದನ್ನು ಟ್ವಿಟರೇಚರ್ ಎಂದು 2. ಇದರಲ್ಲಿ 50 ಪದಗಳಿದ್ದು ಇದನ್ನು ಡ್ರಿಬ್ಲ ಎಂದು. 3. 100 ಪದಗಳಿದ್ದು ಇದನ್ನು ಡ್ಯಾಬ್ಲ ಎಂದು. 4.750 ಪದಗಳಿದ್ದು ಇದನ್ನು ಸಡನ್ ಫಿಕ್ಷನ್ ಎಂದೂ ಕರೆಯುತ್ತಾರೆ. ಕೊನೆಯದಾಗಿ 5. 1000 ಪದರಳಿರುವ ಇದನ್ನು ಪ್ಲ್ಯಾಶ್ ಫಿಕ್ಷನ್ ಅಥವಾ ನ್ಯಾನೋ ಟೇಲ್ಸ ಎಂದು ಸಣ್ಣ ಕಥೆ ಅಥವಾ ಮೈಕ್ರೋ ಸ್ಟೋರಿ ಎಂದೂ ಕರೆಯುತ್ತಾರೆ.

ನಮ್ಮ ಕನ್ನಡ ಸಾಹಿತ್ಯದಲ್ಲಿ ನ್ಯಾನೋ ಕಥೆಗಳೇ ಇರಲಿಲ್ಲವೆಂದರೆ ಹೇಗೆ? ಹೊಸದೆಲ್ಲದಕ್ಕೂ ವಿದೇಶಕ್ಕೆ ಹೋಗುವ. ಅಲ್ಲೆ ಕಣ್ಣು ಹಾಯಿಸುವ. ಅಲ್ಲಿಂದಲೇ ತಂದದ್ದು ಎಂದು ಹೇಳುವ ನಮ್ಮ ಸೋಗಲಾಡಿತನದ ಪ್ರವೃತ್ತಿ ಎಂದೂ ಬದಲಾಗದು. ಕನ್ನಡದಲ್ಲಿ ಪಂಚತಂತ್ರದ ಕಥೆಗಳು, ಜಾತಕ ಕಥೆಗಳು, ನೀತಿ ಕಥೆಗಳು, ಜನಪದ ಕಥೆಗಳು ಸಾಕಷ್ಟು ಇದಕ್ಕೆ ಉದಾಹರಣೆಯಾಗಿ ಸಿಗುತ್ತವೆ. ನಾವದನ್ನು ಗುರುತಿಸದೇ ಮುನ್ನೆಡೆಯುತ್ತೇವೆ. ಸೋಗಲಾಡಿತನದ ಪ್ರವೃತ್ತಿಗೆ ನಾನೊಂದು ಕೊನೆಯದಾಗಿ ನ್ಯಾನೋ ಕಥೆ ಹೇಳಿ ಮುಗಿಸುತ್ತೇನೆ. ಆಷ್ಟ್ರೇಲಿಯಾದಿಂದ ಬಂದ ಆಕಾಶ್ ಊಟಕ್ಕೆ ಕುಳಿತಾಗಲೊಮ್ಮೆ ಶ್ಯಾಶೆಟೊಂದನ್ನು ಕಟ್ ಮಾಡಿ ಊಟದಲ್ಲಿ ಬೆರಿಸಿಕೊಳ್ಳುತ್ತಿದ್ದ ಇದನ್ನು ನೋಡಿ ಅವನ ಅಜ್ಜ ಕೇಳಿಯೇ ಬಿಟ್ಟ ಆಗವನು ಅಜ್ಜ ಇದು ರಫೇಜ್. ಇದು ನಮ್ಮ ಆಹರದಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಅದಕ್ಕೆ ಇದನ್ನು ನಾನು ಆಷ್ಟೇಲಿಯಾದಿಂದ ತಂದಿದ್ದೇನೆ ಎಂದ, ಅಜ್ಜ ತಟ್ಟನೆ ಕಸದ ಬುಟ್ಟಿ ತೋರಿಸಿದ. ಅದರಲ್ಲಿನ ಹಿಟ್ಟಿನ ಗೊಳ್ಳು. ಹಣ್ಣಿನ ಸಿಪ್ಪೆಗಳನ್ನು ನೋಡಿ ಆಕಾಶ್ ಪೆಚ್ಚಾದ. ಹೌದು ಇತ್ತೀಚೆಗೆ ಹಣ್ಣುಗಳಷ್ಟೇ ಅಲ್ಲ ಅತೀ ಸ್ವಚ್ಚತೆ ಎನ್ನುವ ಹೆಸರಿನಿಂದ ಈಗೀಗ ತರಕಾರಿಯ ಸಪ್ಪೆಯನ್ನು ಕಸದ ಬುಟ್ಟಿಗೆಸೆಯುತ್ತಿದ್ದೇವೆ. ಮತ್ತು ಓಟ್ಸನ್ನು ಕರೀದಿಸಿ ತಿನ್ನುತ್ತೇವೆ. ಸರ್ವೆ ಸಾಮನ್ಯ ಬಿಡಿ. ಇದು ಎಲ್ಲ ವಿಷಯಕ್ಕೂ ಅನ್ವಯ ವಾಗುತ್ತದೆ. ಸಾಹಿತ್ಯವು ಹಾಗೆ.

         🔆🔆🔆

✍️ ಶ್ರೀಮತಿ.ಗಿರಿಜಾ ಮಾಲಿಪಾಟೀಲ ವಿಜಯಪುರ