ದೇವರು ಸೃಷ್ಟಿಸಿದ ಈ ಜಗವೇ ವಿಸ್ಮಯ|
ತಡೆಯುವರಾರಿಲ್ಲಿ ಅಧರ್ಮದ ಅಲೆಯ|
ಸತ್ಯವ ಸಾಯಿಸಿ ಅಸತ್ಯ ಎತ್ತಿದೆ ತಲೆಯ|

ಎಲ್ಲ ಮುಳುಗಿಹರು ಮಾಯಾಕಡಲಲ್ಲಿ|
ದುರಾಸೆಗೆ ಬಲಿಯಾಗಿ ತೇಲುತಿಹರಿಲ್ಲಿ|
ಮೋಸದ ಸುಳಿಗೆ ಸಿಕ್ಕಿ ಶವವಾಗಿಹರಿಲ್ಲಿ|

ಮಹಿಳೆಗೆ ಅಗೌರವಿಸಿ ದಾನವರಾದರು|
ಅವಳ ರಕ್ತ ಕಣ್ಣೀರಿಗೆ ಕಾರಣರಾದರು|
ಪ್ರಾಣಪಕ್ಷಿಯ ಹಾರಿಸಿ ಮಾಯವಾದರು|

ಸಾಕ್ಷಿಗಳಿದ್ದರೂ ಕಂಬಿಗಳ ಹೊರಗಡೆ|
ವಿಸ್ಮಯದ ತಾಂಡವ ಈ ಜಗದೆಲ್ಲೆಡೆ|
ಕಂಡರೂ ಕಾಣದಂತೆ ನಮ್ಮೆಲ್ಲರ ನಡೆ|

            🔆🔆🔆

✍️ಶ್ರೀಮತಿ ಸುಧಾ ಕಂದಕೂರ, ಹುಬ್ಬಳ್ಳಿ