ಹಣತೆ ಮಣ್ಣಿನದಾದರೇನು ಜ್ಯೋತಿ ಬೆಳಗದೇನೆ ಸಖಿ
ಪ್ರಿಯತಮ ಬಡವನಾದರೇನು ಪ್ರೀತಿ ತೋರನೇನೆ ಸಖಿ

ಹೂವು ಯಾವುದಾದರೇನು ಮಕರಂದ ನೀಡದೇನೆ ಸಖಿ
ಸಂಬಂಧ ಯಾವುದಾದರೇನು ಬಾಂಧವ್ಯ ಬೆಸೆಯದೇನೆ ಸಖಿ

ಮಳೆಯು ಯಾವುದಾದರೇನು ಬುವಿಯು ನೆನೆಯದೇನೆ ಸಖಿ
ರೂಪ ಯಾವುದಾದರೇನು ಭಾವ ಸ್ಪುರಣವಾಗದೇನೆ ಸಖಿ

ವೃಕ್ಷ ಯಾವುದಾದರೇನು ನೆರಳಾಗದೇನೆ ಸಖಿ
ಹೃದಯ ಯಾವುದಾದರೇನು ಮಿಡಿಯದೇನೆ ಸಖಿ

ಹರಿವ ನದಿಯು ಯಾವುದಾದರೇನು ಹಸಿರ ಚಾಚದೇನೆ ಸಖಿ
‘ಆರಾಧ್ಯ’ ಯಾರದಾರೇನು ಬಾಳ ಬೆಳಗನೇನೆ ಸಖಿ

‌ 🔆🔆🔆.

✍️ಶ್ರೀಮತಿ.ಗಿರಿಜಾ ಮಾಲಿಪಾಟೀಲ ಸಂಸ್ಥಾಪಕ ಅಧ್ಯಕ್ಷರು ‌‌ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪೂರ