ಹಾಯ್ ಎನ್ನುವಷ್ಟರಲ್ಲಿ ಹುಟ್ಟುವುದು ಹಾಯ್ಕು.
ಇತ್ತಿಚೆಗೆ ಎಲ್ಲಾ ಕಡೆ ಕೇಳಿಬರುತ್ತಿರುವ ಉಯಿಲು ಜನರು ಹೆಚ್ಚುಚ್ಚು ಮಾಧ್ಯಮದ ಕಡೆಗೆ ವಾಲುತ್ತಿದ್ದಾರೆ. ಪುಸ್ತಕಗಳ ಕಡೆಗೆ ಅವರಿಗೆ ಒಲವು ಕಡಿಮೆಯಾಗಿದೆ. ಪುಸ್ತಕದ ಬಗೆಗೆ ಒಲವು ಕಡಿಮೆ ಆಗಿದೆಯೇ? ಅಥವಾ ಅವರ ಕುತೂಹಲವೇ ಕಡಿಮೆಯಾಗಿದೆಯೋ ಎಂಬುದನ್ನು ತಿಳಿದುಕೊಳ್ಳುವುದು ಬಹಳಮುಖ್ಯ. ಅಥವಾ ಅವರು ಹೆಚ್ಚಾಗಿ ಬಳಸುವ ಮಾಧ್ಯಮಗಳ ಮೂಲಕವೇ ನಾವು ಅವರನ್ನು ತಲುಪಬೇಕಾ ಎಂಬುದೂ ಕೂಡ ಬಹಳ ಮುಖ್ಯವಾದ ವಿಚಾರವಾಗಿದೆ. ಹೆಚ್ಚಾಗಿ ಜನ ಮೊಬೈಲ್ ಬಳಸುತ್ತಿದ್ದಾರಾ ದರೆ ಅದರಿಂದಲೂ ನಾವು ಸಕಾರಾತ್ಮಕತೆ ಯೆಡೆಗೆ ತಲುಪಲು ಸಾಧ್ಯ. ಬದಲಾಗುವ ವಿದ್ಯಾಮಾನಕ್ಕೆ ತಕ್ಕಂತೆ ನಾವು ನವೀಕರಣ ಗೊಳ್ಳಬೇಕು ಮತ್ತು ಹೊಂದಾಣಿಕೆ ಆಗಲೇಬೇಕು. ಇಲ್ಲದಿದ್ದರೆ ಗೊಣಗುವ ಜಾಯಮಾನದವರು ನಾವಾಗಿಬಿಡುತ್ತೇವೆ. ಕಾಲಕ್ಕೆ ತಕ್ಕಂತಹ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡು ಹೊಸ ಸಾಹಿತ್ಯ ಪ್ರಕಾರ ಗಳನ್ನು ಹುಟ್ಟು ಹಾಕುವಲ್ಲಿ ಸೃಜನಶೀಲತೆ ತೋರಬೇಕು. ಪರಭಾಷೆಯ ಸಾಹಿತ್ಯ ಪ್ರಕಾರಗಳ ಅಧ್ಯಯನದಿಂದಲೂ ನಮಗೆ ಹೊಸ ವಿಚಾರ ಹೊಸ ಪ್ರಯೋಗಗಳಿಗೆ ಸಹಾಯವಾಗುತ್ತದೆ. ಸದಾ ಹೊಸತನ ಗಳನ್ನು ಬಯಸುವ ಯುವ ಮನಸ್ಸು ಗಳನ್ನು ನಾವು ತಲುಪಬಹುದು. ಈಗೀಗ ಯುವ ಮನಸ್ಸಿಗೆ ಹನಿಗವನ, ಮಿನಿಗವನ, ಚುಟುಕುಗಳು ಹೆಚ್ಚು ಹೆಚ್ಚು ಪ್ರೀಯ – ವಾಗುತ್ತಿವೆ. ಅದರಲ್ಲಿ ಹಾಯ್ಕು ಈಗೀಗ ಹೆಚ್ಚು ಜನಪ್ರೀಯವಾಗುತ್ತಿದೆ. ಕಾರಣ ಕಿರಿಯದಾದ ಇದರಲ್ಲಿನ ಹಿರಿಯರರ್ಥ ಇರಬಹುದು.
ಹಾಯ್ಕು ಎನ್ನುವುದು ಒಂದು ಜಪಾನಿನ ಕಾವ್ಯ ಪ್ರಕಾರ. ಯಾವುದಾದರೊಂದು ವಿಷಯ, ಅದರಲ್ಲಿ ಒಂದು ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇವೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ ಇದ್ದು ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇ ಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಜಪಾನಿನಲ್ಲಿ ಬಹು ಜನಪ್ರೀಯ. ಪ್ರಕಾರವಿದು ನಮ್ಮ ಹನಿಗವನ ಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕಾದ, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು.ನಮ್ಮ ಕಂದಪದ್ಯಗಳಲ್ಲಿ ಮಾತ್ರಾ ಕಾಲವನ್ನು ಪರಿಗಣಿಸುತ್ತೇವೆ ಆದರೆ ಹಾಯ್ಕುಗಳಲ್ಲಿ ಅಕ್ಷರಗಳನ್ನು. ಹಾಯ್ಕುಗಳು ಮೂರು ಸಾಲಿನವು. ಮೊದಲನೇ ಸಾಲಿನಲ್ಲಿ 5. ಎರಡನೇ ಸಾಲಿನಲ್ಲಿ 7 ಮತ್ತು ಮೂರನೆಯ ಸಾಲಿನಲ್ಲಿ 5 ಅಕ್ಷರಳು. ಜಪಾನಿಯರು ಈ ನಿಯಮವನ್ನು ಕಟ್ಟುನಿಟ್ಟಾಗಿಪಾಲಿಸುತ್ತಾರೆ. ಆದರೆ ಜಪಾನಿಯರದು ಸ್ವರಬದ್ಧವಾದ ಭಾಷೆ. ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರಗಳ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಚಾರಣೆಯಲ್ಲಿ ಬರುವ ಘಟಕಗಳನ್ನು ಎಣಿಸುತ್ತಾರೆ. “ಸಿಲ್ಯಾಬಲ್ ” ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪ ಡುವ ಶಬ್ದ. ಅದು ಒಂದೇ ಅಕ್ಷರವಿರ ಬಹುದು ಅಥವಾ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಉದಾಹರಣೆ KNOW ಇದರಲ್ಲಿ ಕಣ್ಣಿಗೆ ಕಾಣುವುದು ನಾಲ್ಕು ಅಕ್ಷರಗಳು. ಇದನ್ನೇ ಕನ್ನಡದಲ್ಲಿ ನವ್ ಎಂದರೆ ಎರಡು ಅಕ್ಷರ ಕಾಣುತ್ತವೆ. ಆದರೆ ಉಚ್ಚಾರಣೆಯಲ್ಲಿ ಇದು ನೌ ಆಗುವುದರಿಂದ ಒಂದು ಅಕ್ಷರವೆಂದು ಪರಿಗಣಿಸಬೇಕು. ಕಣ್ ಇದು ಬಕೂಡ ಉಚ್ಚಾರಣೆ ಯಲ್ಲಿ ಒಂದೇ ಆಗಿದ್ದರಿಂದ ಹಾಯ್ಕುವಿನಲ್ಲಿ ಒಂದೇ ಎಂದು ಪರಿಗಣಿಸ ಬೇಕು. ಆದರೆ ಸೈಕಲ್ ಎನ್ನುವಲ್ಲಿ ಎರಡು ಅಕ್ಷರ, ಸೈಕಲ್ಲು ಎನ್ನುವಲ್ಲಿ ಮೂರು ಅಕ್ಷರ ಹಾಗೂ ಸವಾರಿ ಎನ್ನುವ ಉಚ್ಛಾರಣೆಯಲ್ಲಿ ಯೂಮೂರು ಅಕ್ಷರಗಳು ಬರುತ್ತವೆ. ಆದ್ದರಿಂದ. ಹಾಯ್ಕುವಿನ. 1,2,3 ನೇ ಸಾಲುಗಳಲ್ಲಿ 5,7,5 ಅಕ್ಷರಗಳನ್ನು ಎಣಿಸುವುದು ಸೂಕ್ತ. ಹೀಗೆ ಹಾಯ್ಕುಗಳ ಫಾರ್ಮ್ಯಾಟ್ ಸಹಜ.
ಪಪ ಪಪಪ
ಪಪ ಪಪ ಪಪಪ
ಪಪ ಪಪಪ
ಇಲ್ಲಿ ಪ ಎನ್ನುವುದು ಪಾ ಎಂದುಕೂಡ ಆಗಬಹುದು. ಜಪಾನಿಯ ನುಡಿ ಹೆಚ್ಚು ಫಾನೆಟಿಕ್, ಆದ್ದರಿಂದ ಅವರು ಎಣಿಕೆಯನ್ನು ಹೆಚ್ಚುಕಟ್ಟು ನಿಟ್ಟಾಗಿ ಅನುಸರಿಸಬೇಕೆಂದೇನೂ ಇಲ್ಲ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸಬೇಕು
🔆🔆🔆. ✍️ ಶ್ರೀಮತಿ ಗಿರಿಜಾ ಮಾಲಿಪಾಟೀಲ್ ವಿಜಯಪೂರ