ಅವರು ಬೆಳಗಿದರೆ ಲಾಂಗು ಹಿಡಿಯೋರು ಮಚ್ಚಿನಲಿ ಹೊಡೆದರು ಏನೂ ಆಗಿರಲಿಲ್ಲ
ಇವರು ಅಮಾಯಕರಂತೆ ಬಂದು ರೊಚ್ಚಿನಲಿ ಹೊಡೆದರು ಏನೇನೂ ಉಳಿಯಲಿಲ್ಲ

ಅವರು ಒಂದೇ ಬೀಸಿನಲಿ ಚೂಪಾದ ಕಲ್ಲಿನಲಿ ಹೊಡೆದರು ಬುಗುಟೆನೂ ಬಂದಿರಲಿಲ್ಲ
ಇವರು ರಕ್ತದಾಹಿಗಳು ರಕ್ಕಸರು ಕಿಚ್ಚಿನಲಿ ಹೊಡೆದರು ರಕ್ತದೋಕುಳಿಯೇನೂ ನಿಲ್ಲಲಿಲ್ಲ

ಅವರು ಈಗ ಬಜಾರಿನಿಂದ ತಂದ ಬಂದೂಕಿನಲಿ ಹೊಡೆದರು ಯಾರೇನೂ ಆಕ್ಷೇಪಿಸಲಿಲ್ಲ
ಇವರು ಮುಂದೇ ತಯಾರಿಸಿದ ಬಾಂಬಿನಲಿ ಹೊಡೆದರು ಒಬ್ಬ ತಾಯಿನೂ ಬದುಕುಳಿಯಲಿಲ್ಲ

ಅವರು ಷೋಕಿಲಾಲರು ಕಾಸ್ಟ್ಲೀ ಬೂಟುಗಾಲಿನಲಿ ಹೊಡೆದರು ಕಾಲೇನೂ ಸವೆಯಲಿಲ್ಲ
ಇವರು ಹರಿತ ಕುಡುಗೋಲಿನಲಿ ಹೊಡೆದರು ಪ್ರಾಣಪಕ್ಷಿಗಳೊಂದುನೂ ಜೀವಂತವಿರಲಿಲ್ಲ

ಅವರು ಕಲಿಯುಗದಲಿ ಮುಳುಗಿದ ಅರ್ಧ ಕನಸಿನಲಿ ಹೊಡೆದರು ಕನಸೇನೂ ಕೈಗೂಡಲಿಲ್ಲ
“ಜಾಲಿ” ಇವರು ಭವಿಷ್ಯವನು ಭೂತದೊಣ್ಣೆಯಲಿ ಹೊಡೆದರು ಕಾರ್ಗತ್ತಲೇನೂ ಕರಗಲಿಲ್ಲ

     ‌ 🔆🔆🔆            

✍️ ವೇಣು ಜಾಲಿಬೆಂಚಿ, ರಾಯಚೂರು.