ಸಮಾಜದ ಚಿಂತನೆ ಕವಿದು
ಎಲ್ಲ ಭೇದವ ಹರಿದು
ಮಾಯೆಯ ಸೊಕ್ಕ ಮುರಿದು
ಜನಕೆ ತಾಯಿಗುವಾ ಬಾ ಕವಿ॥೧॥
ಅವಗುಣವ ಅಡ್ಡ ಮೆಟ್ಟಿ
ಪಕ್ಷಪಾತವ ಉದ್ದ ಸೀಳಿ
ಬಹುಮಾನದ ಜೊಲ್ಲು ನುಂಗಿ
ಸನ್ಮಾನಕೆ ಮಾನ ಆಗು ಬಾ ಕವಿ॥೨॥
ಮತಿಗೇಡಿ ಮತ ಸಂಘರ್ಷಕೆ
ಶಾಂತಿಯ ನೀರಾಗಿ, ಪ್ರೇಮವ
ತೂರಿ ದ್ವೇಷವ ಮೆರೆವ ಜನಕೆ
ಪ್ರೀತಿಯ ಜೇನಾಗುವ ಬಾ ಕವಿ॥೩॥
ಮಾನವ ಕುಲಕೆ ಜ್ಞಾನವೇ
ಬಂಧು ಅಜ್ಞಾನವೇ ಬಂಧನ
ಜನಮನದ ಅಂಧಕಾರ ಕಳೆವ
ಜ್ಯೋತಿ ನೀನಾಗುವ ಬಾ ಕವಿ॥೪॥
ಮನದ ಬಾರ ಹೊತ್ತ ಮನುಜಂಗೆ
ನಿರಾಳ ಬದುಕಿನ ಆಳ ಅರುಹಿ
ಅರುಹು ಕುರುಹಿನ ನೆಲೆ ಕವಿಲೋಕವೆಂದು ಸಾರು ಬಾ ಕವಿ॥೫॥
🔆🔆🔆
✍️ ಶ್ರೀ ಪರಸಪ್ಪ ತಳವಾರ ಸಹಾಯಕ ಪ್ರಾಧ್ಯಾಪಕರು,ಸಪ್ರದ ಕಾಲೇಜು ಲೋಕಾಪುರ