ಹಾಡಲು ಬರುವವರಿಗೆ ಹಾಡಬೇಡ ಎನುವರು ಹಾಡುಬಾರದವರಿಗೆ ಹಾಡದಿರಬೇಡ ಎನುವರು

ವೇದಿಕೆ ಹತ್ತಲಾಗದವರಿಗೆ ಮೈಕು ಕೊಡುವರು ಮಾತು ಬಲ್ಲವರಿಗೆ ಕೈಗೆ ನೀಡಬೇಡ ಎನುವರು

ಹಸಿದು ಕಂಗಾಲಾದ ಕಣ್ಣುಗಳಿಗೆ ಕನ್ನಡಿ ಬೇಕೆ ಒಡಲಿಗೆ ಅನ್ನದಗುಳು ಉಣಿಸಬೇಡ ಎನುವರು

ಬೀಜ ಬಿತ್ತಿ ಬೆಳೆತೆಗೆದರೆ ಹಸಿವಿನ ಮಕ್ಕಳಿಗನ್ನ ಸಾಲದ ಶೂಲಕೆ ತಳ್ಳಿ ಬದುಕಬೇಡ ಎನುವರು

ಸಮಾಜದಲಿದ್ದು ಸಮಾಜದ ಏಳಿಗೆ ಬಯಸದೆ ‌‌‌‌ ಹೇಗೆ ಇರುವುದು “ಜಾಲಿ”. ಬೆರೆಯಬೇಡ ಎನುವರು

         🔆🔆🔆

✍️ವೇಣು ಜಾಲಿಬೆಂಚಿ, ರಾಯಚೂರು