ಹಸಿದವನ ಒಡಲ ಕಾತುರವದು ಮನಕಲುಕಿದೆ
ಕರುಳನು ಹಿಂಡುವ ಪರಿಸ್ಥಿತಿಯದು ಮನಕಲುಕಿದೆ

ಅನ್ನದಾತನ ಸಾವ ಸರಣಿಗೆ ಎದೆ ನಡುಗಿದೆ ಮಳೆಬಾರದ ಬರದ ಸ್ಥಿತಿಯದು ಮನಕಲುಕಿದೆ

ಹೆಣ ತಿಂದು ಬದುಕುವ ರಣ ಹದ್ದುಗಳ ಹಾರಾಟ
ಬ್ರಷ್ಟಾಚಾರದ ಕೈಚಳಕವದು
ಮನಕಲುಕಿದೆ

ಒಂದೇ ಮನೆಯಂತಿರುವ ಅವನಿಯ ತನುಜರು
ಮನದಿ ಜ್ಯೋತಿರ್ವರ್ಷ ದೂರವದು ಮನಕಲುಕಿದೆ

ಲೋಕದಾ ದಾರಿದ್ರ್ಯಕೆ ಯಾರು ಹೊಣೆ ‘ಆರಾಧ್ಯೆ’
ಎಲ್ಲರು ನಾನಲ್ಲ ಎನ್ನುತಿರುವುದು ಮನಕಲುಕಿದೆ

            🔆🔆🔆

✍️ಶ್ರೀಮತಿ. ಗಿರಿಜಾ ಮಾಲಿ ಪಾಟೀಲ ವಿಜಯಪುರ