ಇಲ್ಲಿ ಬೆಂಕಿಯನು ಹಾಸಿ ನಡೆಯಲು ಹೇಳುವವರು
ಇಲ್ಲಿ ಮೊಳೆಗಳನು ಹಾಸಿ ನಡೆಯಲು ಹೇಳುವವರು
ಧರ್ಮಸಂಕಟ ಎನಬೇಕೋ ವಿಧಿಯಾಟ ಎನಬೇಕೋ
ಇಲ್ಲಿ ತಲವಾರುಗಳನು ಹಾಸಿ ನಡೆಯಲು ಹೇಳುವವರು
ಕಣ್ಣಮುಂದೆ ಕಠೋರ ಕೃತ್ಯಗಳು ಹೇಗೆ ಸಹಿಸುವುದು
ಇಲ್ಲಿ ಕೆಟ್ಟ ಕನಸುಗಳನು ಹಾಸಿ ನಡೆಯಲು ಹೇಳುವವರು
ಕೈಯಿಂದ ಅಲ್ಲ ಮನಸು ಹೃದಯದಿಂದ ಕಟ್ಟಿದರಮನೆ
ಇಲ್ಲಿ ಸಾಲು ಹೆಣಗಳನು ಹಾಸಿ ನಡೆಯಲು ಹೇಳುವವರು
ಕೈಮುಗಿದು ನೆನೆಯಬೇಕೆಂಬ ಸತ್ಯ ಬಚ್ಚಿಡುವುದು ಹೇಗೆ “ಜಾಲಿ”
ಇಲ್ಲಿ ಹುಸಿ ಭರವಸೆಗಳನು ಹಾಸಿ ನಡೆಯಲು ಹೇಳುವವರು
🔆🔆🔆
✍️ ವೇಣು ಜಾಲಿಬೆಂಚಿ ರಾಯಚೂರು
ರಾಯಚೂರು.