ಒಂದು ಹನಿಯ ತುಂಬ ಸಾಗರವಿದ್ದಂತೆ
ನನ್ನ ಪ್ರೀತಿ
ಹೊಸ್ತಿಲ ಮುಂದೆ ಬೆಳಗಿಸಿಟ್ಟ ದೀಪವಿದ್ದಂತೆ ನನ್ನ ಪ್ರೀತಿ

ಸಾವು ನೋವು ಲೋಕದಲಿ ಕಾಣುವ ನಿತ್ಯದ ಅಳಲು
ಗೃಹಿಣಿ ಹಣೆಯಲಿ ನಗುವ ಸಿಂಧೂರವಿದ್ದಂತೆ ನನ್ನ ಪ್ರೀತಿ

ಭಾವನೆಯ ಅಲೆಗೆ ಒಡ್ಡು ಕಟ್ಟುವ ತುಂಟತನ ತಂಗಾಳಿಗೆ
ಕಡಲ ತೀರಕು ಸಾಗುವ ರವಿಕಿರಣವಿದ್ದಂತೆ ನನ್ನ ಪ್ರೀತಿ

ನಾಳೆಯ ತವಕದಲಿ ಇಂದೇ ಧೋ ಎಂದು ಸುರಿವ ಮಳೆಬಿಲ್ಲು
ಸಖಿಯ ಕಣ್ಣಲಿ ಹರಿವ ಅಶ್ರುಧಾರೆಯಿದ್ದಂತೆ ನನ್ನ ಪ್ರೀತಿ

ಜಾನೆ ದೊ ಎಂದರೆ ಮಿಲ್ ನೆ ಭಿ ದೊ ಎಂಬುವ ಅರ್ಥವಿದೆ
“ಜಾಲಿ” ನನಗೆ ಖುದಾ ಕೊಟ್ಟ ದವಾ ಇದ್ದಂತೆ ನನ್ನ ಪ್ರೀತಿ

            🔆🔆🔆

✍️ ವೇಣು ಜಾಲಿಬೆಂಚಿ ರಾಯಚೂರು.